ಬೆಳಗಾವಿ: ತಾಲ್ಲೂಕಿನ ರಾಕಸಕೊಪ್ಪ ಜಲಾಶಯ ಭರ್ತಿಯಾಗಲು ಒಂದು ಅಡಿ ಮಾತ್ರ ಬಾಕಿ ಉಳಿದಿದೆ. ಹಾಗಾಗಿ, ಶುಕ್ರವಾರದಿಂದಲೇ ಎರಡು ಕ್ರಸ್ಟ್ಗೇಟ್ಗಳನ್ನು ತೆರೆದು ಆರು ಇಂಚು ಅಂತರದಿಂದ ನೀರು ಹೊರ ಹರಿಸಲಾಗುತ್ತಿದೆ.

ಪಶ್ಚಿಮ ಘಟ್ಟ ಪ್ರದೇಶ ಮತ್ತು ಮಾರ್ಕೆಂಡೇಯ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಾರ್ಕೆಂಡೇಯ ನದಿಗೆ ಕಟ್ಟಿರುವ ರಾಕಸಕೊಪ್ಪ ಅಣೆಕಟ್ಟೆ ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಭರ್ತಿಯಾಗಿದೆ. ಜಲಾಶಯದ ಕೆಳಹಂತದ ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ಜಲಾಶಯ 0.67 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕನಿಷ್ಠ ನೀರಿನ ಸಂಗ್ರಹಣಾ ಗುರುತ್ವಾಕರ್ಷಣೆಯ ಮಟ್ಟಗಳು 2,446 ಅಡಿಯಷ್ಟು ನೀರು ಸಂಗ್ರಹಿಸಲು ಸಾಧ್ಯವಿದೆ. 2424 ಅಡಿಗಳವರೆಗೆ ಡೆಡ್ಸ್ಟೋರೇಜ್ ಇದೆ. ಗರಿಷ್ಠ ಮಟ್ಟ 2,475 ಅಡಿಗಳಲ್ಲಿ ಶುಕ್ರವಾರ 2,474 ಅಡಿ ತಲುಪಿದೆ.

ಬೆಳಗಾವಿಯ ನಗರದ ಅರ್ಧ ಭಾಗಕ್ಕೆ ರಾಕಸಕೊಪ್ಪ ಜಲಾಶಯದಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತದೆ. ಈ ಬಾರಿ ಬೇಗ ಭರ್ತಿಯಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.