ಬೆಳಗಾವಿ: ತಂತ್ರಜ್ಞಾನ ಪ್ರಭಾವದ ಈ ದಿನಗಳಲ್ಲಿ ಮಾನವೀಯತೆ ನಶಿಸದಂತೆ ಹಾಗೂ ಸಾಮಾಜಿಕ ಸಂಬಂಧಗಳು ಕಳಚಿಕೊಳ್ಳದಂತೆ ಎಚ್ಚರ ವಹಿಸಬೇಕು’ ಎಂದು ಬಿಜೆಪಿ ಮುಖಂಡ ಡಿ.ಎಚ್. ಶಂಕರಮೂರ್ತಿ ಸಲಹೆ ನೀಡಿದರು.

ಆರ್.ಎಚ್. ಕುಲಕರ್ಣಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಬೆಂಗಳೂರಿನ ಎಚ್.ಆರ್. ಶ್ರೀಷ ಅವರಿಗೆ ರಾಜ್ಯಮಟ್ಟದ ಆರ್.ಎಚ್. ಕುಲಕರ್ಣಿ ಪತ್ರಿಕಾ ಪ್ರಶಸ್ತಿ ಮತ್ತು ಮಹಿಳಾ ಸಬಲೀಕರಣಕ್ಕೆ ವೈಜಯಂತಿ ಚೌಗಲಾ ಅವರಿಗೆ ಆರ್.ಎಚ್. ಕುಲಕರ್ಣಿ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ತಂತ್ರಜ್ಞಾನ ಕ್ರಾಂತಿ ಮೊದಲಾದ ವಿದ್ಯಮಾನಗಳಿಂದಾಗಿ ಸಮಾಜದ ಎಲ್ಲ ರಂಗದಲ್ಲೂ ಏರಿಳಿತ, ವ್ಯತ್ಯಾಸಗಳಾಗಿವೆ. ಹಾಗೆಂದು ನಾವು ತಂತ್ರಜ್ಞಾನಗಳನ್ನು ದೂರುತ್ತಾ ಕೂರುವುದು ಸರಿಯಲ್ಲ. ಪರಿಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಚರ್ಚೆ, ಸಂವಾದ ನಡೆಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಕಾಲದಲ್ಲಿರುವ ನಮಗೆ ತಂತ್ರಜ್ಞಾನ ಹಾಗೂ ನೂತನ ಆವಿಷ್ಕಾರಗಳು ಬೇಕೇ ಬೇಕು. ಆದರೆ, ಅವುಗಳಿಂದ ಮಾನವೀಯ ಸಂಬಂಧ ಮತ್ತು ಸಾಮಾಜಿಕ ಮೌಲ್ಯಗಳು ಕುಸಿಯದಂತೆ ಎಚ್ಚರ ವಹಿಸಬೇಕು. ಈ ವಿಷಯವನ್ನು ಹಿರಿಯರು ಕಿರಿಯರಿಗೆ ಸಮಾಧಾನದಿಂದ ತಿಳಿಸಿಕೊಡಬೇಕು’ ಎಂದು ಕಿವಿಮಾತು ಹೇಳಿದರು.

ಡಾ.ಎಸ್.ಎಸ್. ತುಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ನ ರೂವಾರಿ ಸುಭಾಷ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ ಕುಲಕರ್ಣಿ ಟ್ರಸ್ಟ್ನ ಉದ್ದೇಶಗಳನ್ನು ತಿಳಿಸಿದರು. ಸಾಹಿತಿ ಸರಜೂ ಕಾಟ್ಕರ್ ಪರಿಚಯಿಸಿದರು. ವಿದ್ಯಾ ದೇಶಪಾಂಡೆ ಮತ್ತು ಪೂರ್ಣಿಮಾ ಕುಲಕರ್ಣಿ ಪ್ರಶಸ್ತಿ ಪುರಸ್ಕೃತರ ಸನ್ಮಾನ ಪತ್ರ ವಾಚಿಸಿದರು. ನೀರಜಾ ಗಣಾಚಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.