ದಿನ ಭವಿಷ್ಯ: ಈ ರಾಶಿಯ ಸ್ವಂತ ಉದ್ಯೋಗಿಗಳಿಗೆ ಲಾಭದಾಯಕ ದಿನ
Published 7 ನವೆಂಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬೇರೆಯವರನ್ನು ಮರುಳುಗೊಳಿಸುವ ಮಾತಿನ ಕೌಶಲ್ಯ ನಿಮ್ಮಲ್ಲಿದೆ, ಅದು ಈ ದಿನ ನಿಮಗೆ ಮುಳ್ಳಾಗಬಹುದು. ಬಹಳಷ್ಟು ಅನುಕೂಲಕರ ಫಲಗಳನ್ನು ನಿಮಗೆ ಈ ದಿನದಲ್ಲಿನ ಶುಭ ಸಂಧರ್ಭವು ತರಲಿದೆ.
ವೃಷಭ
ಮತ್ತೊಬ್ಬರ ಜೀವನದಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದು ತಿಳಿದು ಬಹಳ ಸಂತೋಷವಾಗುವುದು. ಮೆಚ್ಚಿದವರ ಜೊತೆಗೆ ಮದುವೆಯಾಗಲು ಹಿರಿಯರಿಂದ ಒಪ್ಪಿಗೆ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.
ಮಿಥುನ
ನೀವು ಆರಿಸಿಕೊಂಡ ಮಾರ್ಗದಲ್ಲಿ ಸರಿ ತಪ್ಪುಗಳ ಬಗ್ಗೆ ಯೋಚಿಸಿ ಏಕಾಗ್ರತೆಯಿಂದ ಮುನ್ನೆಡೆಯಿರಿ. ಹಲವು ದಿನಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಉತ್ತರ ಸಿಗುವುದು. ಸ್ವಂತ ಉದ್ಯೋಗಿಗಳಿಗೆ ಲಾಭದಾಯಕ ದಿನ.
ಕರ್ಕಾಟಕ
ನಿಮ್ಮಲ್ಲಿರುವ ಹಿಂಜರಿಕೆಯ ಮತ್ತು ಭಯದ ಸ್ವಭಾವ ನಿಮ್ಮ ಹಿನ್ನೆಡೆಗೆ ಕಾರಣವಾಗಿದೆ. ಹಾಗಾಗಿ ಯಾವುದಕ್ಕೂ ಸಹ ಹಿಮ್ಮೆಟ್ಟದೆ ಬೇರೆಯವರ ಮಾತಿಗೆ ಚಿಂತೆ ಪಡದೆ ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಪ್ರಯತ್ನವಿರಲಿ.
ಸಿಂಹ
ಬಂಡವಾಳ ಹೂಡಿಕೆ, ಷೇರು ಖರೀದಿ ವಿಚಾರಗಳತ್ತ ಆಸಕ್ತಿ ಹೆಚ್ಚಲಿದ್ದೂ ಯೋಚಿಸಿ ವ್ಯವಹರಿಸುವುದು ಪರಮಶ್ರೇಷ್ಠ. ಗೃಹೋಪಕರಣಗಳ ಖರೀದಿ ಅಥವಾ ನೂತನ ವಸ್ತ್ರವನ್ನು ಖರೀದಿಯನ್ನು ಮಾಡುವ ಯೋಗವಿದೆ.
ಕನ್ಯಾ
ವಿದೇಶದಲ್ಲಿನ ಹುದ್ದೆಗೆ ಕರೆ ಬಂದು ಹೋಗುವ ತಯಾರಿಯನ್ನು ನಡೆಸುವಿರಿ. ಸಂಸಾರದ ವಿಚಾರದಲ್ಲಿ ಹಾಗು ಉದ್ಯೋಗದಲ್ಲಿ ದೃಢ ಚಿತ್ತದಿಂದ ಮುಂದುವರಿಯಿರಿ. ಕೌಟುಂಬಿಕ ವಿಚಾರಗಳತ್ತ ಸಂಪೂರ್ಣ ಗಮನ ನೀಡಿ.
ತುಲಾ
ಇಂದು ಹಲವಾರು ಕಾರಣಗಳಿಗೆ ಸ್ನೇಹಿತರು ನಿಮ್ಮ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸಬಹುದು. ಅನಾವಶ್ಯಕ ತಿರುಗಾಟ ಇದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಉತ್ತಮವಾದ ಆದಾಯ ಬರುವುದು.
ವೃಶ್ಚಿಕ
ಎಲ್ಲಾ ರೀತಿಯ ಧವಸ ಧಾನ್ಯ ಹಾಗೂ ಮಸಾಲಾ ಸಾಮಗ್ರಿಗಳ ರಫ್ತು ವ್ಯಾಪಾರಿಗಳು ಮತ್ತು ಏಜೆಂಟರುಗಳಿಗೆ ಈ ದಿನ ವ್ಯವಹಾರದಲ್ಲಿ ಹೆಚ್ಚಿನ ಅನುಕೂಲವಾಗುವುದು. ಸುಗಂಧ ದ್ರವ್ಯದ ಮಾರಾಟದಲ್ಲಿ ಲಾಭ ಸಿಗಲಿದೆ.
ಧನು
ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಳ್ಳುವ ಸನ್ನಿವೇಶಕ್ಕೆ ಸಿಕ್ಕಿಕೊಂಡಂತಹ ಸಮಯ ಬರಬಹುದು. ಶಿಕ್ಷಕ ವೃತ್ತಿಯಲ್ಲಿ ಸಾಧನೆಗೆ ಪ್ರಶಸ್ತಿ ಪಡೆಯುವಂತಾಗಲಿದೆ. ಗೃಹ ನಿರ್ಮಾಣ ಕಾರ್ಯ ಚಾಲನೆಯಾಗುವುದು.
ಮಕರ
ಬೆಟ್ಟದಂತೆ ಕಂಡು ಬಂದ ಒಂದು ಸಮಸ್ಯೆಯು ನಿಮ್ಮ ಬುದ್ಧಿವಂತಿಕೆಯಿಂದ ಮಂಜಿನಂತೆ ಕರಗುವುದು. ಸಾಲ ತೀರಿಸಲು ಹೊಸದೊಂದು ಮಾರ್ಗ ನಿಮ್ಮ ಮುಂದೆ ಕಾಣಲಿದೆ. ಫೈನಾನ್ಸವರಿಗೆ ಆದಾಯ ವೃದ್ಧಿಯಾಗುತ್ತದೆ.
ಕುಂಭ
ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭವೊಂದು ಬರಲಿದೆ. ಸರ್ಕಾರಿ ಪತ್ರಗಳಿಗೆ ಸಂಬಂಧಿಸಿದ ಬಹಳ ಹಿಂದೆ ಪ್ರಾರಂಭಿಸಿದ್ದ ಕಾರ್ಯಗಳು ಪೂರ್ಣಗೊಳ್ಳುತ್ತವೆ.
ಮೀನ
ಖರ್ಚಿಗೆ ತಕ್ಕಂತೆ ಧನಾಗಮನ ಇರುವುದರಿಂದ ಚಿಂತೆ ಇರದು. ತಾಯಿಯ ದೇಹಾರೋಗ್ಯ ತಪಾಸಣೆ ನಡೆಸಲು ವೈದ್ಯರ ಬಳಿ ಹೋಗುವಿರಿ. ಮಕ್ಕಳ ಮನರಂಜನೆಗಾಗಿ ಖರ್ಚು ಸಂಭವಿಸುವುದು.