ಮೆಲ್ಬರ್ನ್: ಭಾರತ 'ಎ' ತಂಡ, ಇಂದು ಇಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ ಆರಂಭವಾದ ನಾಲ್ಕು ದಿನಗಳ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 57.1 ಓವರ್ಗಳಲ್ಲಿ ಕೇವಲ 161 ರನ್ಗಳಿಗೆ ಆಲೌಟ್ ಆಗಿದೆ.

ಬಳಿಕ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಎ, ಮೊದಲ ದಿನದ ಅಂತ್ಯಕ್ಕೆ 17.1 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಬಾರ್ಡರ್-ಗವಾಸ್ಕರ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಈ ಪಂದ್ಯದಲ್ಲಿ ಆಡುವಂತೆ ಕೆ.ಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ಧ್ರುವ್ ಜುರೇಲ್ ಅವರಿಗೆ ಸೂಚಿಸಲಾಗಿತ್ತು.

ಆದರೆ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ಕೇವಲ ನಾಲ್ಕು ರನ್ ಗಳಿಸಿ ಔಟ್ ಆಗಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಕಲಾತ್ಮಕ ಇನಿಂಗ್ಸ್ ಕಟ್ಟಿದ ಧ್ರುವ್ ಜುರೇಲ್ 80 ರನ್ ಗಳಿಸಿ ಗಮನ ಸೆಳೆದರು.

ಇನ್ನುಳಿದಂತೆ ಅಭಿಮನ್ಯು ಈಶ್ವರನ್ (0), ಸಾಯಿ ಸುದರ್ಶನ್ (0), ನಾಯಕ ಋತುರಾಜ್ ಗಾಯಕವಾಡ್ (4), ದೇವದತ್ತ ಪಡಿಕ್ಕಲ್ (26), ನಿತೀಶ್ ರೆಡ್ಡಿ (16), ತನುಷ್ ಕೋಟ್ಯಾನ್ (0) ವೈಫಲ್ಯ ಅನುಭವಿಸಿದರು.

ಆಸ್ಟ್ರೇಲಿಯಾ ಎ ತಂಡದ ಪರ ಮೈಕೆಲ್ ನೆಸರ್ ನಾಲ್ಕು ಮತ್ತು ವೆಬ್ಸ್ಟರ್ ಮೂರು ವಿಕೆಟ್ ಗಳಿಸಿ ಮಿಂಚಿದರು.

ಭಾರತ–ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ಪರ್ತ್ನಲ್ಲಿ ಆರಂಭವಾಗಲಿದೆ.
.ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಟೆಸ್ಟ್: ರಾಹುಲ್ ಆಟದ ಮೇಲೆ ಚಿತ್ತ.ಮೊದಲ ಪಂದ್ಯ ರೋಹಿತ್ ಆಡದಿದ್ದರೆ ಸಂಪೂರ್ಣ ಸರಣಿಗೆ ಬೂಮ್ರಾ ನಾಯಕರಾಗಲಿ: ಗವಾಸ್ಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.