ಮೂಡಲಗಿ: ತಾಲ್ಲೂಕಿನ ಹುಣಶ್ಯಾಳ ಪಿಜಿಯ ಸತೀಶ ಶುಗರ್ಸ್ ಕಾರ್ಖಾನೆಯ 2023–24ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಮಾರ್ಚ್ 1ರಂದು ರಾತ್ರಿ 8 ಗಂಟೆಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ.

ಕಬ್ಬು ನೋಂದಾಯಿಸಿದ ರೈತರು ಕಾರ್ಖಾನೆಯ ಕ್ಷೇತ್ರ ಸಿಬ್ಬಂದಿಯನ್ನು ಸಂಪರ್ಕಿಸಿ ಪ್ರಸ್ತುತ ಹಂಗಾಮಿಗಾಗಿ ನೋಂದಣಿ ಮಾಡಿದ ಕಬ್ಬನ್ನು ತಮ್ಮ ಸ್ವಂತ ಗ್ಯಾಂಗ್ ಮತ್ತು ವಾಹನ ಅಥವಾ ಕರಾರು ಮಾಡಲಾದ ಗ್ಯಾಂಗ್ ಮತ್ತು ವಾಹನದ ಮೂಲಕ ಮಾರ್ಚ್ 1ರ ರಾತ್ರಿ 8ರ ಒಳಗಾಗಿ ಕಾರ್ಖಾನೆಗೆ ಪೂರೈಕೆ ಮಾಡಬೇಕು. ನಿಗದಿತ ದಿನಾಂಕದೊಳಗಾಗಿ ಕಾರ್ಖಾನೆಗೆ ಪೂರೈಕೆಯಾಗದೆ ಉಳಿದ ಕಬ್ಬಿಗೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರಿಯಾಗಿರುವುದಿಲ್ಲ ಎಂದು ಕಾರ್ಖಾನೆಯ ಆಡಳಿತ ಮಂಡಳಿಯ ಹಿರಿಯ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.