ಬೆಳಗಾವಿ: ‘ರಾಜ್ಯದ ಹಲವು ಮಠಗಳ ಸ್ವಾಮೀಜಿಗಳೂ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹೆಣ್ಣುಮಕ್ಕಳನ್ನು ಹಾಳು ಮಾಡಿದ್ದಾರೆ. ಬಹಳಷ್ಟು ಜನ ಕೆಟ್ಟವರೇ...’ ಎಂದು ಮಹಿಳೆಯರಿಬ್ಬರು ಮಾತನಾಡಿಕೊಂಡ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ನನ್ನ ಮಗಳು 6 ತಿಂಗಳಿಂದ ನಾಪತ್ತೆ: ಮುರುಘಾ ಮಠದ ಆವರಣದಲ್ಲಿ ಅಂಧ ವ್ಯಕ್ತಿ ರೋದನ

ಬೆಳಗಾವಿಯ ಸತ್ಯಕ್ಕ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಗಂಗಾವತಿಯ ಇನ್ನೊಬ್ಬ ಮಹಿಳೆ ಜತೆಗೆ ಮೊಬೈಲ್ ಸಂಭಾಷಣೆ ನಡೆಸಿದ್ದಾರೆ.ರಾಜ್ಯದ ಬೇರೆಬೇರೆ ಮಠಗಳು, ಪೀಠಗಳ ಹಾಗೂ ಸಮುದಾಯ ನಾಯಕತ್ವದಲ್ಲಿ ಗುರುತಿಸಿಕೊಂಡ ಸ್ವಾಮೀಜಿಗಳ ಹೆಸರನ್ನೂ ಈ ಮಹಿಳೆಯ ಹೆಸರಿಸಿದ್ದಾರೆ.

‘ತಮಿಳುನಾಡು ಸತ್ಯಕ್ಕ ಎಂದರೆ ಕೆಲವು ಸ್ವಾಮಿಗಳು ಮಾತೇ ಆಡುವುದಿಲ್ಲ. ನಾನು ಹತ್ತು ವರ್ಷ ತಮಿಳುನಾಡಿನಲ್ಲಿ ಇದ್ದು, ಬಸವ ಸೇವಾ ಸಮಿತಿ ಕಟ್ಟಿ ಬಿಟ್ಟು ಬಂದಿದ್ದೇನೆ. ಈಗ ಈ ಸ್ವಾಮೀಜಿಯ ಘಟನೆ ಸುಳ್ಳು ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ, ಅವರ ಬಳಿ ಇದ್ದ ಹೆಣ್ಣುಮಕ್ಕಳಿಗೇ ಗೊತ್ತು ಅವರು ಎಂಥವರು ಎಂಬುದು’ ಎಂದು ಮಹಿಳೆ ಆರೋಪಿಸಿದ್ದಾರೆ.

‘ಒಬ್ಬ ಸ್ವಾಮೀಜಿ ನನಗೇ ಆಫರ್ ಕೊಟ್ಟಿದ್ದರು. ಮಧುರೈನಲ್ಲಿ ನಮ್ಮ ಪೀಠದ ಐದು ಎಕರೆ ಜಮೀನಿ ಇದೆ. ನನ್ನೊಂದಿಗೆ ಚೆನ್ನಾಗಿ ಇರು. ಎಲ್ಲ ವ್ಯವಸ್ಥೆ ಮಾಡುತ್ತೇನೆ ಅಂದಿದ್ದರು. ಎಲ್ಲ ಹೊರಗೆ ಹಾಕಬಹುದು. ಆದರೆ ಸೇಫ್ಟಿ ಇಲ್ಲ...’ ಎಂದೂ ಬೆಳಗಾವಿಯ ಮಹಿಳೆ ಆರೋಪಿಸಿದ ಧ್ವನಿ ಇದೆ.

ಈ ಆಡಿಯೊ ಮುದ್ರಿಕೆ ಎಲ್ಲಿಯದು ಎಂದು ಖಚಿತವಾಗಿಲ್ಲ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಶರಣರ ಕೈದಿ ಸಂಖ್ಯೆ '2261'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.