ಮೂಡಲಗಿ: ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಅಂಬಲಿ ಒಡೆಯ ಅಡವಿಸಿದ್ಧೇಶ್ವರ ಜಾತ್ರೆ ಸೆ. 6ರಿಂದ 9ರವರೆಗೆ ಪೀಠಾಧಿಪತಿ ಅಡವಿಸಿದ್ಧರಾಮ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.

ಸೆ.6ರಂದು ಬೆಳಿಗ್ಗೆ ಜಾತ್ರೆಯು ಷಟಸ್ಥಲ್ ಧ್ವಜಾರೋಹಣದೊಂದಿಗೆ ಆರಂಭವಾಗುವುದು. ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಗೋಕಾಕದ ಅಶೋಕ ಪೂಜೇರಿ, ಭೀಮಪ್ಪ ಗಡಾದ, ಸರ್ವೋತ್ತಮ ಜಾರಕಿಹೊಳಿ ಭಾಗವಹಿಸುವರು. ಬೆಳಿಗ್ಗೆ 10ಕ್ಕೆ ಆರೋಗ್ಯ ಉಚಿತ ತಪಾಸಣೆ ಇರುವುದು. ಸಂಜೆ 4ಕ್ಕೆ ತಾಯಂದಿರಿಂದ ಬಸವ ಬುತ್ತಿ ಕಾರ್ಯಕ್ರಮ, ಸಂಜೆ 6.30ಕ್ಕೆ ಬಸವ ದರ್ಶನ ಪ್ರವಚನ ಮಹಾಮಂಗಲವಾಗುವುದು. ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮ್ಮುಖವನ್ನು ದತ್ತಾತ್ರೇಯಬೋಧ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕೆಪಿಸಿಸಿ ಸದಸ್ಯ ಅರವಿಂದ ದಳವಾಯಿ, ಸೋಮಯ್ಯ ಸಕ್ಕರೆ ಕಾರ್ಖಾನೆಯ ಬಾಲಚಂದ್ರ ಭಕ್ಷಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಎನ್.ಟಿ. ಪಿರೋಜಿ ಭಾಗವಹಿಸುವರು. ಪಂಚಾಕ್ಷರಿ ಶಾಸ್ತ್ರಿಗಳಿಂದ ಪ್ರವಚನ ಮಂಗಲವಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.