ಬೆಳಗಾವಿ: ಜಿಲ್ಲೆಗೆ ಮಂಜೂರಾದ ಒಟ್ಟು ಏಳು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಇನ್ನೂ ಎರಡು ಆಸ್ಪತ್ರೆಗಳು ಕಾರ್ಯಾರಂಭ ಮಾಡಿಲ್ಲ. ಚಿಕ್ಕೋಡಿ ಹಾಗೂ ಖಾನಾಪುರದದಲ್ಲಿ ಮೂಲಸೌಕರ್ಯಗಳು ಸಿದ್ಧಗೊಂಡರೂ ಸಿಬ್ಬಂದಿ ನೇಮಕ ಹಾಗೂ ಸಣ್ಣಪುಟ್ಟ ಕೆಲಸಗಳಿಂದಾಗಿ ಇನ್ನೂ ಜನರ ಉಪಯೋಗಕ್ಕೆ ಬಂದಿಲ್ಲ.

ಉಳಿದಂತೆ, ಗೋಕಾಕದಲ್ಲಿ 100 ಬೆಡ್, ಒಂಟಮೂರಿಯಲ್ಲಿ 30 ಬೆಡ್, ನಿಪ್ಪಾಣಿ 30 ಬೆಡ್, ಸವದತ್ತಿ 60 ಬೆಡ್, ಬೈಲಹೊಂಗಲ 100 ಬೆಡ್‌ನ ಆಸ್ಪತ್ರೆಗಳು ಕೆಲಸ ಆರಂಭಿಸಿವೆ.

ಚಿಕ್ಕೋಡಿಯಲ್ಲಿ 100 ಹಾಸಿಗೆ ಹಾಗೂ ಖಾನಾಪುರದ 60 ಹಾಸಿಗೆಗಳ ಆಸ್ಪತ್ರೆಗಳು ಅನಾಥ ಸ್ಥಿತಿಯಲ್ಲಿವೆ. ಕಳೆದ ತಿಂಗಳು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಅವರೇ ಧ್ವನಿ ಎತ್ತಿದ್ದರು. ‘ಕಷ್ಟಪಟ್ಟು ಅನುದಾನ ತಂದು ಆಸ್ಪತ್ರೆ ಕಟ್ಟಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ತಲುಪದಾಗಿದೆ’ ಎಂದು ಕಿಡಿ ಕಾರಿದ್ದರು.

‘ಕೇವಲ 15 ದಿನಗಳಲ್ಲಿ ಈ ಎರಡೂ ಆಸ್ಪತ್ರೆಗಳು ಕಾರ್ಯಾರಂಭ ಮಾಡಬೇಕು, ಇಲ್ಲದಿದ್ದರೆ ಕಠಿಣ ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು. ಇದಾಗಿ ತಿಂಗಳಾದರೂ ಆಸ್ಪತ್ರೆಗಳು ಮಾತ್ರ ತೆರೆದುಕೊಂಡಿಲ್ಲ.

ಬಾರದ ಉದ್ಘಾಟನೆ ಭಾಗ್ಯ:

ಚಿಕ್ಕೋಡಿ: ರಾಷ್ಟ್ರೀಯ ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಲ್ಲಿ ಪಟ್ಟಣದ ಹೊರ ವಲಯದಲ್ಲಿ 5 ಎಕರೆ ಪ್ರದೇಶದಲ್ಲಿ ₹20 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡಿದೆ. 2015ರಲ್ಲಿ ಆರಂಭವಾದ 100 ಹಾಸಿಗೆಯ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯು ಬಹುತೇಕ ಮುಕ್ತಾಯಗೊಂಡಿದ್ದರೂ ಉದ್ಘಾಟನೆಯ ಭಾಗ್ಯ ಕಾಣದೇ ಇರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ತ್ರೀ ರೋಗ ತಜ್ಞ–1, ಅರಿವಳಿಕೆ ತಜ್ಞರು-2, ಮಕ್ಕಳ ತಜ್ಞ-1, ರೇಡಿಯಾಲಾಜಿಸ್ಟ್-1, ಹಿರಿಯ ಶುಶ್ರೂಷಕ -1, ಶುಶ್ರೂಷಕ-20, ಕಿರಿಯ ಫಾರ್ಮಾಸಿಸ್ಟ್-1, ದ್ವಿತೀಯ ದರ್ಜೆ ಸಹಾಯಕ-1, ಡಾಟಾ ಎಂಟ್ರಿ ಆಪರೇಟರ್ 2, ಡಿ ಗ್ರೂಫ್ ನೌಕರರು 6 ಸೇರಿದಂತೆ ಒಟ್ಟು 36 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಸುಸಜ್ಜಿತ ಕಟ್ಟಡ, ಆವರಣಗೋಡೆ, ಶವಾಗಾರ, ವೈದ್ಯರ ಹಾಗೂ ಸಿಬ್ಬಂದಿಯ ವಸತಿ ಗೃಹ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ.

ಶಸ್ತ್ರ ಚಿಕಿತ್ಸೆ ಕೊಠಡಿ, ವಾರ್ಡ್‍ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವೈದ್ಯಕೀಯ ಉಪಕರಣಗಳೂ ಬಂದಿವೆ. 2 ಲಿಫ್ಟ್‌ಗಳ ಪೈಕಿ ಈಗಾಗಲೇ 1 ಲಿಫ್ಟ್ ಕಾರ್ಯ ಪೂರ್ಣಗೊಂಡಿದೆ. 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದ್ದರಿಂದ ಇದೀಗ ಕೇವಲ ಒಂದು ಕೊಳವೆಬಾವಿ ಮಾತ್ರ ಇದೆ. ಇನ್ನೂ ಒಂದೆರಡು ಕೊಳವೆಬಾವಿ ಕೊರೆಯಿಸಿ ನೀರಿನ ಸೌಕರ್ಯ ಕಲ್ಪಿಸಬೇಕಿದೆ. ಆಸ್ಪತ್ರೆಗೆ ಆಂಬುಲೆನ್ಸ್ ಸೇರಿದಂತೆ ವಾಹನಗಳು ಸರಾಗವಾಗಿ ಆಗಮಿಸಲು ಉತ್ತಮ ರಸ್ತೆ ನಿರ್ಮಾಣ ಮಾಡಬೇಕಿದೆ.

ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 600ರಿಂದ 800 ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿವೆ. ಈ ಕಾರಣಕ್ಕಾಗಿಯೇ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ಕಟ್ಟಡ ತಲೆ ಎತ್ತಿದೆ.

2023ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಆಸ್ಪತ್ರೆಯ ಲೋಕಾರ್ಪಣೆಗೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಯಿತು. ಸ್ವಾತಂತ್ರ್ಯೋತ್ಸವ ದಿನ (ಆ.15) ಉದ್ಘಾಟಿಸುವ ಭರವಸೆ ನೀಡಲಾಗಿತ್ತು. ಈಗ ಅದೂ ಕೂಡ ಹುಸಿಯಾಗಿದೆ.

ಚಿಕ್ಕೋಡಿಯಲ್ಲಿ ತಾಯಿ– ಮಕ್ಕಳ ಆಸ್ಪತ್ರೆಯ ಅವಶ್ಯಕತೆ ಬಹಳ ಇದೆ. ಖಾಸಗಿ ಆಸ್ಪತ್ರೆಗಳ ಸುಲಿಗೆ ನಿಲ್ಲಬೇಕಿದೆ. ಕೂಡಲೇ ಆಸ್ಪತ್ರೆ ಪ್ರಾರಂಭಿಸಬೇಕು

– ಸುವರ್ಣಾ ಚಿಕ್ಕಲಕಿ ಚಿಕ್ಕೋಡಿ ನಿವಾಸಿ

ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚದಿಂದಾಗಿ ಸ್ಥಳೀಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಚಿಕ್ಕೋಡಿಯಲ್ಲಿ ಆಸ್ಪತ್ರೆ ಸಿದ್ಧಗೊಂಡರೂ ಲೋಕಾರ್ಪಣೆ ಮಾಡದಿರುವುದು ಅಚ್ಚರಿ

–ಕೃಷ್ಣ ಕೆಂಚನವರ ಸಾಮಾಜಿಕ ಕಾರ್ಯಕರ್ತ ಕೇರೂರ

ಆಸ್ಪತ್ರೆ ಪ್ರಾರಂಭಿಸಲು ಅವಶ್ಯವಿರುವ ವೈದ್ಯರು ಶೂಶ್ರೂಷಕಿಯರು ಸಿಬ್ಬಂದಿ ಲಭ್ಯ ಇದ್ದಾರೆ. ಆಸ್ಪತ್ರೆಯನ್ನು ಇಲಾಖೆಗೆ ಹಸ್ತಾಂತರಿಸಿದಲ್ಲಿ ಸೇವೆ ಪ್ರಾರಂಭಿಸಲಾಗುವುದು

–ಡಾ.ಎಸ್.ಎಸ್.ಗಡದ ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಚಿಕ್ಕೋಡಿ

ಜಿಲ್ಲೆಯ ಏಳು ತಾಯಿ ಮಕ್ಕಳ ಆಸ್ಪತ್ರೆಗಳ ಪೈಕಿ ಐದು ಕಾರ್ಯಾರಂಭ ಮಾಡಿವೆ. ಚಿಕ್ಕೋಡಿ ಖಾನಾಪುರ ಆಸ್ಪತ್ರೆಗಳ ಎಲ್ಲ ಅಗತ್ಯಗಳನ್ನು ಪೂರೈಸಲಾಗಿದೆ. ಶೀಘ್ರ ಆರಂಭಿಸಲಾಗುವುದು

– ಡಾ.ಮಹೇಶ ಕೋಣಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಬೇಕಿದೆ ಬ್ಲಡ್‌ಬ್ಯಾಂಕ್

ಬೈಲಹೊಂಗಲ: ಇಲ್ಲಿನ 100 ಬೆಡ್‌ಗಳ ತಾಯಿ ಮಕ್ಕಳ ಆಸ್ಪತ್ರೆ ಕಾರ್ಯಾರಂಭ ಮಾಡಿದೆ. ಆಸ್ಪತ್ರೆಯಲ್ಲಿ ಬ್ಲಡ್‌ಬ್ಯಾಂಕ್ ಇಲ್ಲ. ಬ್ಲಡ್ ಸ್ಟೋರೇಜ್ ಯುನಿಟ್ ಇದೆ. ಬೆಳಗಾವಿಯಿಂದ ರಕ್ತ ತಂದು ಸಂಗ್ರಹಿಸಿಡಲಾಗುತ್ತದೆ. ಬ್ಲಡ್ ಬ್ಯಾಂಕ್ ಇದ್ದರೆ ಇನ್ನೂ ಹೆಚ್ಚಿನ ಶಸ್ತ್ರಚಿಕಿತ್ಸೆ ಹೆರಿಗೆ ಮಾಡಲು ಅನುಕೂಲ ಆಗಲಿದೆ. ಜತೆಗೆ ಇನ್ನಷ್ಟು ವೈದ್ಯರು ಮತ್ತು ಸಿಬ್ಬಂದಿ ಕೂಡ ನೇಮಕ ಆಗಬೇಕಿದೆ. ಈ ಅಸ್ಪತ್ರೆಯಲ್ಲಿ ದಿನದ 24 ಗಂಟೆಯಲ್ಲಿ ವೈದ್ಯರ ಸೇವೆ ದೊರೆಯಲಿದೆ. ಸ್ಕ್ಯಾನಿಂಗ್ ಸಿಜರಿನ್ ಚಿಕ್ಕ ಮಕ್ಕಳ ಮಕ್ಕಳ ಆರೋಗ್ಯ ತಪಾಸಣೆ ಚುಚ್ಚುಮದ್ದು ಅಪೌಷ್ಟಿಕತೆಗೆ ಒಳಗಾದ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ವ್ಯವಸ್ಥೆ ಇಲ್ಲಿ ಇದೆ. ಹೆರಿಗೆ ಆದ ತಕ್ಷಣ ಮಹಿಳೆಯರ ಖಾತೆಗೆ ನೇರವಾಗಿ ₹600 ಭತ್ಯೆ ಜಮೆ ಮಾಡಲಾಗುತ್ತದೆ. 24 ಗಂಟೆಗಳ ಆಂಬುಲೆನ್ಸ್ ಒದಗಿಸಲಾಗುತ್ತದೆ. ತುರ್ತು ಚಿಕಿತ್ಸಾ ಘಟಕ 100 ಹಾಸಿಗೆಗಳಿಗೂ ಆಕ್ಸಿಜನ್ ಸೇವೆ ಇದೆ. ಪ್ರತಿ ತಿಂಗಳಿಗೆ 100ಕ್ಕೂ ಹೆಚ್ಚು ಹೆರಿಗೆ ಮಾಡಲಾಗುತ್ತದೆ. ಹೆರಿಗೆ ವಿಭಾಗ ವಿಶಾಲವಾಗಿದ್ದು ಏಕ ಕಾಲಕ್ಕೆ 8 ರಿಂದ 10 ಹೆರಿಗೆ ಮಾಡಲು ವ್ಯವಸ್ಥೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಜನಪ್ರತಿನಿಧಿಗಳ ಗುದ್ದಾಟ...

ಖಾನಾಪುರ: ಇಲ್ಲಿನ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ₹15 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇನ್ನೂ ಉದ್ಘಾಟನೆ ಕಂಡಿಲ್ಲ. ಕಟ್ಟಡ ಪೂರ್ಣಗೊಂಡು ವರ್ಷವಾದರೂ ಜನಪ್ರತಿನಿಧಿಗಳು ಇದನ್ನು ಜನರಿಗೆ ಸಮರ್ಪಿಸಲು ಸಿದ್ಧರಿಲ್ಲ. ಈಗ ವೈದ್ಯಕೀಯ ಉಪಕರಣಗಳು ಮತ್ತು ಸಿಬ್ಬಂದಿ ಒದಗಿಸಿದರೆ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲ್ಲೂಕು ಆಸ್ಪತ್ರೆ ಆವರಣದಲ್ಲೇ 60 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಗುವಿನ ಆಸ್ಪತ್ರೆ ಮಂಜೂರು ಮಾಡಿಸಿದ್ದರು. 2022ರಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ 2023ರ ಮಾರ್ಚ್‌ನಲ್ಲಿ ಪೂರ್ಣಗೊಂಡಿತ್ತು. ‘ಶಸ್ತ್ರ ಚಿಕಿತ್ಸಾ ಕೊಠಡಿ ತೀವ್ರ ನಿಗಾ ಘಟಕದ ಪರಿಕರಗಳು ನವಜಾತ ಶಿಶುಗಳಿಗೆ ಇನ್ಸುಲೇಟರ್ ಅಗತ್ಯ ಪೀಠೋಪಕರಣ ಮತ್ತು ವೈದ್ಯಕೀಯ ಉಪಕರಣಗಳು ಇನ್ನೂ ಬಂದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯರು ಮತ್ತು ಸಿಬ್ಬಂದಿ ನಿಯೋಜನೆ ಕಾರ್ಯ ಪೂರ್ಣವಾಗಿಲ್ಲ. ಹೀಗಾಗಿ ಆಸ್ಪತ್ರೆ ಕಾರ್ಯನಿರ್ವಹಣೆ ಆರಂಭವಾಗಲು ವಿಳಂಬವಾಗಿದೆ’ ಎನ್ನುತ್ತವೆ ಮೂಲಗಳು. ಹಾಲಿ ಶಾಸಕ ಹಾಗೂ ಮಾಜಿ ಶಾಸಕಿ ಮಧ್ಯದ ಪ್ರತಿಷ್ಠೆಯ ಗುದ್ದಾಟವೇ ಈ ಆಸ್ಪತ್ರೆ ವಿಳಂಬವಾಗಲು ಕಾರಣ ಎಂಬುದು ಜನರಲ್ಲಿ ನಡೆದ ಚರ್ಚೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.