ಬೆಳಗಾವಿ ತಾಲ್ಲೂಕಿನ ನಿಂಗ್ಯಾನಟ್ಟಿನಲ್ಲಿ ತಾವು ನೆಟ್ಟು ಪೋಷಿಸಿದ ಮರ ತೋರಿಸುತ್ತಿರುವ ಪರಿಸರವಾದಿ ಶಿವಾಜಿ ಕಾಗಣಿಕರ/ಪ್ರಜಾವಾಣಿ ಚಿತ್ರ
ಅಂದು ಮಾಡಿದ ಕೆಲಸ ಈಗ ಫಲ ಕೊಡುತ್ತಿದೆ. 2 ಲಕ್ಷ ಸಸಿಗಳು ಸಮೃದ್ಧವಾಗಿ ಬೆಳೆದುನಿಂತಿವೆ.
– ಶಿವಾಜಿ ಕಾಗಣಿಕರ, ಪರಿಸರವಾದಿ
ಮರಗಳೇ ನಮಗೆ ಆಧಾರ
‘ನನ್ನದು 1 ಎಕರೆ 10 ಗುಂಟೆ ಜಮೀನಿದೆ. ಅಲ್ಲಿ ರಾಗಿ ಶೇಂಗಾ ಬೆಳೆಯುತ್ತಿದ್ದೆ. ಒಮ್ಮೊಮ್ಮೆ ಉತ್ತಮ ಫಸಲೇ ಬರುತ್ತಿರಲಿಲ್ಲ. ಆದರೆ ಶಿವಾಜಿ ಕಾಗಣಿಕರ ನೆಟ್ಟು ಪೋಷಿಸಿದ ಮಾವು ತೆಂಗು ಚಿಕ್ಕು ಹಲಸು ಬೇವಿನ ಮರಗಳೇ ನಮಗೀಗ ಆಧಾರವಾಗಿವೆ. ಅವುಗಳಿಂದ ಉತ್ತಮ ಆದಾಯ ಕೈಗೆಟುಕುತ್ತಿದ್ದು ನೆಮ್ಮದಿಯಿಂದ ಬದುಕು ಸಾಗಿಸುವಂತಾಗಿದೆ’ ಎಂದು ನಿಂಗ್ಯಾನಟ್ಟಿಯ ಶಂಕರ ಹಿರೇಮಠ ಹೇಳಿದರು.