ಹೊಸಪೇಟೆ: ಡಾನ್ ಬಾಸ್ಕೊ ಸಂಸ್ಥೆಯಿಂದ ಶುಕ್ರವಾರ ನಗರದಲ್ಲಿ ‘ಫ್ರೈಡೆ ಫಾರ್ ಫ್ಯೂಚರ್’ ಶೀರ್ಷಿಕೆಯ ಅಡಿಯಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯಿಂದ ಪ್ರಮುಖ ಮಾರ್ಗಗಳ ಮೂಲಕ ನಗರಸಭೆ ವರೆಗೆ ಜಾಥಾ ನಡೆಸಲಾಯಿತು. ನಂತರ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಫಾದರ್ ಲಾರೆನ್ಸ್ ಮಾತನಾಡಿ, ‘ಫ್ರೈಡೆ ಫಾರ್ ಫ್ಯೂಚರ್’ ಎಂಬ ಹೆಸರಿನಲ್ಲಿ ಸ್ವೀಡನ್ ದೇಶದ ಗ್ರಟಾ ಥನ್ಬರ್ಗ್ ಎಂಬುವರು ಈ ದಿನ ಪರಿಸರ ಸಂರಕ್ಷಣೆ ಕುರಿತು ಚಳವಳಿ ಆರಂಭಿಸಿದ್ದರು. ಪ್ರತಿವರ್ಷ ಈ ದಿನ ಜಾಥಾ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿ, ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗುತ್ತದೆ. ಅದರ ಭಾಗವಾಗಿ ನಗರದಲ್ಲಿ ಜಾಥಾ ನಡೆಸಲಾಗಿದೆ’ ಎಂದು ಹೇಳಿದರು.

‘ಈ ಚಳವಳಿ ಇಂದು ವಿಶ್ವವ್ಯಾಪಿಯಾಗಿದೆ. ಅದು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕು. ಆಗ ಸರ್ಕಾರ ಕಣ್ಣು ತೆರೆದು ಪರಿಸರ ಸಂರಕ್ಷಣೆಗೆ ಮುಂದಾಗಬಹುದು’ ಎಂದು ಹೇಳಿದರು.

ಸಿಸ್ಟರ್ ಸೀಮಾ, ಸಿಸ್ಟರ್ ಮೆರ್ಲಿನ್, ಸಾವಿತ್ರಿ, ಡಾನ್ ಬಾಸ್ಕೊ ವಸತಿ ನಿಲಯ, ಡಾ.ಬಿ.ಆರ್. ಅಂಬೇಡ್ಕರ್ ಶಾಲೆ ಹಾಗೂ ಸಂಸ್ಥೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.