ಬಳ್ಳಾರಿ: ತಾಲ್ಲೂಕಿನ ಮೋಕಾ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಹತ್ತು ವರ್ಷ ವಯಸ್ಸಿನ ಬಾಲಕಿ ಮೇಲೆ ಅದೇ ಗ್ರಾಮದ ಮೂರು ಮಕ್ಕಳ ತಂದೆ ವೀರೇಶ (39) ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಬಾಲಕಿಯು ಆಟವಾಡುತ್ತಿದ್ದಾಗ ಆರೋಪಿಯು ಬಲವಂತವಾಗಿ ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ದೈಹಿಕವಾಗಿಯೂ ಹಲ್ಲೆ ನಡೆಸಿದ್ದ. ಬಾಲಕಿಯ ಕಿರುಚಾಟ ಕೇಳಿ ಧಾವಿಸಿ ಬಂದ ತಾಯಿಯು ಅಡ್ಡಿಪಡಿಸಿದ್ದರಿಂದ, ಅವರ ಮೇಲೆಯೂ ಹಲ್ಲೆ ನಡೆಸಿದ್ದ. ಬಳಿಕ, ಆಕೆಯ ಪೋಷಕರ ಮೇಲೆಯೂ ಆರೋಪಿ ಕುಟುಂಬದವರಿಂದ ಹಲ್ಲೆ ನಡೆಸಿದರು ಎಂದು ತಿಳಿದು ಬಂದಿದೆ.

ನಿರ್ಲಕ್ಷ್ಯ: ಘಟನೆ ಬಳಿಕ ದೂರು ನೀಡಲು ಮೋಕಾ ಠಾಣೆಗೆ ಹೋದ ಬಾಲಕಿಯ ಕುಟುಂಬದ ಸದಸ್ಯ ರಿಗೆ ದೂರು ಬರೆದುಕೊಂಡು ಬರುವಂತೆ ಹೇಳಿ ಠಾಣೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಠಾಣೆ ಪಿಎಸ್ಐ ಭರತ್, ಘಟನೆ ಗಮನಕ್ಕೆ ಬಂದಿಲ್ಲ.ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಬಾಲಕಿಯ ಕುಟುಂಬದ ಸದಸ್ಯರು ಗ್ರಾಮೀಣ ಡಿವೈಎಸ್ಪಿ ಕಚೇರಿಗೆ ಬಂದು ದೂರು ನೀಡಲು ನಿರ್ಧರಿಸಿದ್ದಾರೆ ಎಂದು ವಕೀಲ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.