ಬೆಂಗಳೂರು: ಕಾಂಗ್ರೆಸ್ನ 12 ಶಾಸಕರ ಕ್ಷೇತ್ರದಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ತಲಾ ₹45 ಕೋಟಿ ವೆಚ್ಚ ಮಾಡಲು ಸರ್ಕಾರ ಅನುಮತಿ ನೀಡಿದೆ.

ಶಾಸಕರು ಯಾವ ಕಾಮಗಾರಿಗಳನ್ನು ನಡೆಸಬೇಕು ಎಂಬ ಬಗ್ಗೆ ಪಟ್ಟಿ ತಯಾರಿಸಿ ಬಿಬಿಎಂಪಿಗೆ ಸಲ್ಲಿಸಬೇಕು. ಆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಿಬಿಎಂಪಿಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿತ್ತು. ವಿಧಾನಸಭೆ ಚುನಾವಣೆ ಅವಧಿಯೂ ಸೇರಿದರೆ ಏಪ್ರಿಲ್ನಿಂದ ಈವರೆಗೆ ಒಂದೂ ಟೆಂಡರ್ ಕರೆಯಲಾಗಿಲ್ಲ. ಕಾಂಗ್ರೆಸ್ ಶಾಸಕರ ಒತ್ತಾಯದ ಮೇರೆಗೆ ಇದೀಗ ಸರ್ಕಾರ ಹೊಸ ಕಾಮಗಾರಿಗಳನ್ನು ನಡೆಸಲು ಅನುಮತಿ ನೀಡಿದೆ.

ಪ್ರತಿ ಕ್ಷೇತ್ರಕ್ಕೆ ₹45 ಕೋಟಿ ಹೊಸ ಅನುದಾನವೇನಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಅನುಮತಿಸಲಾಗಿದ್ದ ಅನುದಾನವನ್ನೇ ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಆದರೆ, ಈಗ ಕಾಂಗ್ರೆಸ್ ಶಾಸಕರು ಹೇಳಿದ ಕಾಮಗಾರಿಗಳೂ ಮಾತ್ರ ನಡೆಯಲಿವೆ. ಹಿಂದೆ ನಿರ್ಧರಿಸಲಾಗಿದ್ದ ಕೆಲವು ಕಾಮಗಾರಿಗಳನ್ನು ಕೈಬಿಟ್ಟು, ಅದರ ಬದಲು ಹೊಸ ಕಾಮಗಾರಿಗಳು ನಡೆಯಲಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಬಿಜೆಪಿ ಶಾಸಕರಿರುವ ವಿಧಾನಸಭೆ ಕ್ಷೇತ್ರಗಳ ಅನುದಾನವನ್ನೂ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ ವರ್ಗಾಯಿಸುವಂತೆಯೂ ಒತ್ತಡ ಹಾಕಲಾಗುತ್ತಿದೆ. ₹45 ಕೋಟಿ ಕಾಮಗಾರಿ ನಡೆಸಲು ಸೂಚಿಸಿರುವುದರಿಂದ ಅದನ್ನು ಇತರೆ ಕ್ಷೇತ್ರಗಳ ಕಾಮಗಾರಿಗಳನ್ನು ನಿಲ್ಲಿಸುವ ಬಾಬ್ತಿನಲ್ಲಿ ಹೊಂದಾಣಿಕೆ ಮಾಡಲು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ ಆರಂಭವಾಗಿದ್ದ ಕಾಮಗಾರಿಗಳನ್ನು ಬದಲಾಯಿಸುವುದು ಬೇಡ. ಅದು ಮುಂದುವರಿಯಲಿ. ಇದೀಗ ₹45 ಕೋಟಿ ಅನುದಾನವನ್ನು ಇತರೆ ಕ್ಷೇತ್ರಗಳಿಂದ ಹೊಂದಾಣಿಕೆ ಮಾಡಿಕೊಂಡು ಹೊಸ ಕಾಮಗಾರಿಗಳನ್ನೇ ಆರಂಭಿಸಲು ಕಾಂಗ್ರೆಸ್ ಶಾಸಕರು ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.