ಬೆಂಗಳೂರು: ಅನಧಿಕೃತವಾಗಿ ಅಳವಡಿಸಿದ್ದ 8,362 ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸಿರುವ ಬಿಬಿಎಂಪಿ 142 ಎಫ್ಐಆರ್ಗಳನ್ನು ದಾಖಲಿಸಿದೆ. ₹ 1.03 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ನಗರದಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಜೂನ್ 1ರಿಂದ ಆರಂಭವಾಗಿತ್ತು. ಅನಧಿಕೃತವಾಗಿ ಅಳವಡಿಸಿದ್ದ ಜಾಹೀರಾತುಗಳು, ಶುಭಕೋರುವ ಬ್ಯಾನರ್ಗಳನ್ನು ತೆರವುಗೊಳಿಸಿರುವ ಬಿಬಿಎಂಪಿ ಅಧಿಕಾರಿಗಳು 267 ದೂರುಗಳನ್ನು ನೀಡಿದ್ದು, 142 ಎಫ್ಐಆರ್ಗಳನ್ನು ದಾಖಲಿಸಲಾಗಿದೆ.

ಜನ್ಮದಿನದ ಶುಭಾಶಯ, ಇನ್ನಿತರ ಶುಭಾಶಯಗಳನ್ನು ಕೋರುವ ಫ್ಲೆಕ್ಸ್ಗಳನ್ನು ಅನಧಿಕೃತವಾಗಿ ಅಳವಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ತೆರವು ಕಾರ್ಯದಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಕೈ ಜೋಡಿಸಿದ್ದಾರೆ. ಅನಧಿಕೃತ ಫ್ಲೆಕ್ಸ್, ಬ್ಯಾನರ್ಗಳು ಕಂಡುಬಂದರೆ ಸಾರ್ವಜನಿಕರು ದೂರವಾಣಿ ಸಂಖ್ಯೆ 1533ಗೆ ಕರೆ ಮಾಡಿ ಅಥವಾ ವಾಟ್ಸ್ಆ್ಯಪ್ ಸಂಖ್ಯೆ 9480683939ಕ್ಕೆ ಛಾಯಾಚಿತ್ರದ ಸಮೇತ ದೂರು ನೀಡಬಹುದು ಎಂದು ಬಿಬಿಎಂಪಿ ಉಪ ಆಯುಕ್ತರು (ಜಾಹೀರಾತು) ತಿಳಿಸಿದ್ದಾರೆ.

ಅಂಕಿ ಅಂಶ

ವಲಯ;ತೆರವು;ದೂರು;ಎಫ್ಐಆರ್;ದಂಡ (₹)

ಪೂರ್ವ;439;10;10;0

ಪಶ್ಚಿಮ;135;74;27;53,000

ದಕ್ಷಿಣ;351;12;12;0

ಆರ್ಆರ್ ನಗರ;1,431;85;7;50,000

ದಾಸರಹಳ್ಳಿ;368;6;6;0

ಮಹದೇವಪುರ;3,989;26;26;0

ಯಲಹಂಕ;673;24;24;0

ಬೊಮ್ಮನಹಳ್ಳಿ;976;30;30;0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.