‘ಪಾರ್ಸೆಲ್‌ಗಳಲ್ಲಿ ಇಂಗ್ಲೆಂಡ್, ಥಾಯ್ಲೆಂಡ್, ನೆದರ್ಲೆಂಡ್ ಸೇರಿದಂತೆ ಹಲವು ದೇಶಗಳಿಂದ ಕಳುಹಿಸಿರುವ ವಿಳಾಸವಿದೆ. ಪಾರ್ಸೆಲ್ ತರಿಸಿಕೊಂಡಿದ್ದವರ ನಗರದ ವಿಳಾಸವನ್ನು ನಮೂದಿಸಲಾಗಿದೆ. ಆದರೆ, ಆ ವಿಳಾಸಕ್ಕೆ ತೆರಳಿ ವಿಚಾರಿಸಿದರೆ, ಸಂಬಂಧಪಟ್ಟ ವ್ಯಕ್ತಿ ವಾಸವಿರುವುದಿಲ್ಲ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಪೆಡ್ಲರ್ಗಳು ಕೆಲವೊಂದು ಪಾರ್ಸೆಲ್‌ಗಳನ್ನು ಸ್ವೀಕರಿಸದೆ ಬಿಟ್ಟಿರುವ ಸಾಧ್ಯತೆಯಿದೆ. ಹೀಗಾಗಿ 2018 ರಿಂದಲೂ ಮಾದಕವಸ್ತು ಪಾರ್ಸೆಲ್‌ಗಳು ಹಾಗೆಯೇ ಉಳಿದುಕೊಂಡಿವೆ’ ಎಂದು ಮೂಲಗಳು ಹೇಳಿವೆ.