ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಭಾರತ ಜೂನಿಯರ್ ತಂಡಕ್ಕೆ ಅಮೀರ್ ಅಲಿ ನಾಯಕ

Published : 6 ಅಕ್ಟೋಬರ್ 2024, 14:31 IST
Last Updated : 6 ಅಕ್ಟೋಬರ್ 2024, 14:31 IST
ಫಾಲೋ ಮಾಡಿ
Comments

ಬೆಂಗಳೂರು: ಅಮೀರ್ ಅಲಿ ಅವರನ್ನು ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಆಡಲಿರುವ ಭಾರತ ಜೂನಿಯರ್ ತಂಡಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರೋಹಿತ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. 

ಒಲಿಂಪಿಯನ್  ಪಿ.ಆರ್. ಶ್ರೀಜೇಶ್ ಅವರು ಜೂನಿಯರ್ ತಂಡದ ಮುಖ್ಯ ಕೋಚ್ ಆಗಿ ಹೊಣೆ ವಹಿಸಿಕೊಂಡ ನಂತರ ಕಾರ್ಯನಿರ್ವಹಿಸಲಿರುವ ಮೊದಲ ಟೂರ್ನಿ ಇದಾಗಿದೆ.  

ಮಲೇಷ್ಯಾದಲ್ಲಿ ಟೂರ್ನಿಯು ಆಯೋಜನೆಗೊಂಡಿದೆ. ಭಾರತ ತಂಡವು ಜಪಾನ್ (ಅ.19), ಗ್ರೇಟ್ ಬ್ರಿಟನ್ (ಅ.20), ಮಲೇಷ್ಯಾ (ಅ.22), ಆಸ್ಟ್ರೇಲಿಯಾ (ಅ. 23) ಮತ್ತು ನ್ಯೂಜಿಲೆಂಡ್ (ಅ.25) ಎದುರು ಪಂದ್ಯಗಳನ್ನು ಆಡಲಿದೆ.  ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು  ಅ.26ರಂದು ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 

ಇದೇ ವರ್ಷದ ನವೆಂಬರ್‌ನಲ್ಲಿ ಮಸ್ಕತ್‌ನಲ್ಲಿ ಜೂನಿಯರ್ (ಪುರುಷರ) ಏಷ್ಯಾಕಪ್ ಹಾಕಿ ಟೂರ್ನಿ ನಡೆಯಲಿದೆ.   

ತಂಡ ಇಂತಿದೆ: ಗೋಲ್‌ಕೀಪರ್ಟ್: ಬಿಕ್ರಂಜೀತ್ ಸಿಂಗ್, ಅಲಿಖಾನ್. ಡಿಫೆಂಡರ್ಸ್: ಅಮೀರ್ ಅಲಿ (ನಾಯಕ), ತಲೆಮ್ ಪ್ರಿಯೊಬರ್ತಾ, ಶ್ರದ್ಧಾನಂದ ತಿವಾರಿ, ಸುಖವಿಂದರ್, ಅನ್ಮೋಲ್ ಎಕ್ಕಾ, ರೋಹಿತ್ (ಉಪನಾಯಕ). ಮಿಡ್‌ಫೀಲ್ಡರ್: ಅಂಕಿತ್ ಪಾಲ್, ಮನ್ಮೀತ್ ಸಿಂಗ್, ರೋಶನ್ ಕುಜುರ್, ಮುಕೇಶ್ ಟೊಪೊ, ಚಂದನ್ ಯಾದವ್. ಫಾರ್ವರ್ಡ್ಸ್: ಗುರ್ಜೋತ್ ಸಿಂಗ್, ಸೌರಭ್ ಆನಂದ್ ಖುಷ್ವಾಹ, ದಿಲ್ರಾಜ್ ಸಿಂಗ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಕೊನೈನ್ ದಾದ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT