ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿ ಅದರಲ್ಲಿಯೇ ಸಾಕುನಾಯಿ ಬಿಟ್ಟು ಲಾಕ್ ಮಾಡಿ ಕೊಯಮುತ್ತೂರಿಗೆ ಹೋಗಿದ್ದಾರೆ.

ಕಾರಿನ ಗಾಜು ಹಾಕಿ, ಲಾಕ್ ಮಾಡಿದ್ದರಿಂದ ಉಸಿರಾಡಲು ಗಾಳಿ ಇಲ್ಲದೆ ಗ್ರೇಟ್ ಡೇನ್ ತಳಿಯ ದೈತ್ಯ ನಾಯಿ ತೀವ್ರವಾಗಿ ನಿತ್ರಾಣಗೊಂಡಿತ್ತು.

ಎರಡು - ಮೂರು ತಾಸು ಗಾಳಿ ಇಲ್ಲದೆ, ಆಮ್ಲಜನಕ ಕೊರತೆಯಿಂದ ನಾಯಿಯ ಮೂಗಿನಲ್ಲಿ ರಕ್ತ ಸ್ರಾವವಾಗುತಿತ್ತು.

ಗಸ್ತಿನಲ್ಲಿದ್ದ ಸಿಐಎಸ್ಎಫ್ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಕಾರಿನಲ್ಲಿ ನಾಯಿ ಬೊಗಳುತ್ತಿರುವುದನ್ನು ಗಮನಿಸಿ ಕಿಟಕಿಯ ಗಾಜು ಒಡೆದು ನಾಯಿಯನ್ನು ರಕ್ಷಿಸಿದ್ದಾರೆ.

ನಂತರ, ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿರುವ ಚಾರ್ಲಿ ಎಂಬ ಸ್ವಯಂ ಸೇವಾ ಸಂಸ್ಥೆ ಸಂಪರ್ಕಿಸಿ ಚಿಕಿತ್ಸೆಗೆ ಕಳಿಸಲಾಗಿದೆ.

ಸೋಮವಾರ ರಾತ್ರಿ 9 ಗಂಟೆಗೆ ಕೊಯಮುತ್ತೂರಿನಿಂದ ಮರಳಿ ಬಂದ ಬೆಂಗಳೂರಿನ ಕಲ್ಯಾಣ ನಗರದ ವಿಕ್ರಮ್ ರಾಮದಾಸ್ ಲಿಂಗೇಶ್ವರ್(41) ಅವರನ್ನು ವಶಕ್ಕೆ ಪಡೆದು, ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಲಾಗಿದೆ.

ನಾಯಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ನಾಯಿಗೆ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.