ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ಮಹಿಳೆಯರಿಗೇ ಏಕೆ ನೀಡುತ್ತಾರೆ ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಉಮಾಶ್ರೀ ‘ಮಹಿಳೆಯರು ಎಲ್ಲ ಖಾತೆಗಳನ್ನು ನಿಭಾಯಿಸಲು ಸಮರ್ಥರಿದ್ದಾರೆ. ಸ್ತ್ರೀಯರು ಈ ಖಾತೆಯನ್ನು ನಿಭಾಯಿಸಿದರೆ ಇಲಾಖೆಗೆ ಹೆಚ್ಚು ಶಕ್ತಿ ಬರುತ್ತದೆ ಎಂಬ ಕಾರಣಕ್ಕೆ ಮಹಿಳೆಯರಿಗೆ ನೀಡಲಾಗುತ್ತದೆ’ ಎಂದರು. ಅನ್ಯ ಭಾಷೆಗಳ ಚಿತ್ರರಂಗದಲ್ಲಿ ಅವಕಾಶಗಳ ಬಗೆಗಿನ ಪ್ರಶ್ನೆಗೆ ‘ಅನ್ಯ ಭಾಷೆಗಳಲ್ಲಿ ಅವಕಾಶಗಳು ಮೊದಲು ಅಷ್ಟಾಗಿ ಬರಲಿಲ್ಲ. ಆಮೇಲೆ ಬಂದರೂ ಕನ್ನಡ ನನಗೆ ಏನನ್ನು ಕಡಿಮೆ ಮಾಡಿಲ್ಲ ಎಂದು ಆಸಕ್ತಿ ತೋರಿಸಲಿಲ್ಲ’ ಎಂದು ವಿವರಿಸಿದರು.