ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ ಸೇರಿ ಮೂವರನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಗ್ರಹಾರ ಲೇಔಟ್‌ನ ನಿವಾಸಿ ನಜ್ಮಾ ಕೌಸರ್ (30), ಹೆಗಡೆನಗರದ ನಿವಾಸಿಗಳಾದ ಮೊಹ್ಮದ್ ಅತೀಕ್ (20) ಮತ್ತು ಕರೀಂ ಉಲ್ಲಾ (24) ಬಂಧಿತರು.

‘ಪ್ರಮುಖ ಆರೋಪಿ ನಜ್ಮಾ, ಜಾಲತಾಣಗಳಲ್ಲಿ ಯುವಕರ ಜೊತೆ ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ಸಂಖ್ಯೆ ಪಡೆದು, ಸಲುಗೆಯಿಂದ ಮಾತನಾಡಿ, ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದಳು. ಇದಕ್ಕೆ ಅತೀಕ್, ಕರೀಂ ಸಾಥ ನೀಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬೆಂಗಳೂರಿನ ಯುವಕರನ್ನೇ ಗುರಿಯಾಗಿಸಿಕೊಂಡಿದ್ದ ನಜ್ಮಾ, ನಂತರ ಅವರೊಂದಿಗೆ ಕಷ್ಟ–ಸುಖ ಮಾತನಾಡಿಕೊಂಡು ಅತ್ಮೀಯತೆ ಬೆಳೆಸಿಕೊಳ್ಳುತ್ತಿದ್ದಳು. ಅವರಿಂದ ಹಣ ಪಡೆದು ಹಿಂತಿರುಗಿಸುವ ಮೂಲಕ ವಿಶ್ವಾಸ ಗಳಿಸುತ್ತಿದ್ದಳು. ‘ನಮ್ಮ ಮನೆಯಲ್ಲಿ ಯಾರೂ ಇಲ್ಲ, ನೀವು ಮನೆಗೆ ಬನ್ನಿ’ ಎಂದು ಯುವಕರನ್ನು ಆಹ್ವಾನಿಸುತ್ತಿದ್ದಳು’ ಎಂದು ಮೂಲಗಳು ತಿಳಿಸಿವೆ.

‘ಸಂಚು ತಿಳಿಯದೇ ಮನೆಗೆ ತೆರಳುತ್ತಿದ್ದ ಯುವಕರನ್ನು ಲೈಂಗಿಕವಾಗಿ ಪ್ರಚೋದಿಸಿ ಕೋಣೆಗೆ ಕರೆದೊಯ್ಯುತ್ತಿದ್ದಳು. ಕೋಣೆಯಲ್ಲಿ ಇರುತ್ತಿದ್ದ ಉಳಿದ ಆರೋಪಿಗಳು ಯುವಕರನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಿದ್ದರು. ಹಣ ನೀಡದಿದ್ದರೆ ಅತ್ಯಾಚಾರ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.