ಬೆಂಗಳೂರು: ರೈಸ್ ಪುಲ್ಲಿಂಗ್ ಚೊಂಬು ವ್ಯವಹಾರದ ಕಥೆ ಹಣೆದು ಉದ್ಯಮಿಯೊಬ್ಬರ ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡು ವಂಚಿಸಿದ್ದ ಆರೋಪದ ಪ್ರಕರಣದಲ್ಲಿ ಮಹಿಳೆ ಸೇರಿ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಾಗರತ್ನ, ಹೊಳೆನರಸೀಪುರದ ರಾಮಚಂದ್ರ, ಬೆಂಗಳೂರಿನ ಸುಕುಮಾರನ್, ಮಂಜುನಾಥ ಹಾಗೂ ನಟೇಶ್ ಬಂಧಿತರು.

ಆರೋಪಿಗಳಿಂದ ರೈಸ್ ಪುಲ್ಲಿಂಗ್ ಚೊಂಬುಗಳನ್ನು ಜಪ್ತಿ ಮಾಡಲಾಗಿದೆ. ಉದ್ಯಮಿ ಹೆಣ್ಣೂರು ಪ್ರಕೃತಿ ಲೇಔಟ್ ನಿವಾಸಿ ವಿ.ಕಾಂತರಾಜು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗಂಗಾ ಬೋರ್ವೆಲ್ ಹೆಸರಿನಲ್ಲಿ ಉದ್ಯಮಿ ಕಾಂತರಾಜು ವ್ಯವಹಾರ ಮಾಡುತ್ತಿದ್ದು, ಕಚ್ಚಾ ತೈಲ ಮತ್ತು ರಿಫೈನರಿ ಘಟಕ ತೆರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕನಕಪುರದ ಮನು ಮತ್ತು ರಾಮಣ್ಣ ಎಂಬುವರ ಮೂಲಕ ಆರೋಪಿಗಳಾದ ನಾಗರತ್ನ ಮತ್ತು ರಾಮಚಂದ್ರಪ್ಪ ಪರಿಚಯವಾಗಿದೆ. ಈ ವೇಳೆ ನಾಗರತ್ನ, ಚನ್ನರಾಯಪಟ್ಟಣದಲ್ಲಿ ಪೆಟ್ರೋಲ್ ಬಂಕ್ ಇದ್ದು, ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಅಶ್ವತ್ಥನಾರಾಯಣ ಪರಿಚಯವಿದ್ದು, ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ನಂಬಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಉದ್ಯಮಕ್ಕೆ ಅಗತ್ಯವಿರುವ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೊಂದಿಸುವುದು ಆಗುವುದಿಲ್ಲ. ನಮ್ಮ ಬಳಿ ಐದು ರೈಸ್ ಪುಲ್ಲಿಂಗ್ ಚೊಂಬುಗಳಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳಿಗೆ ₹ 5 ಲಕ್ಷ ಕೋಟಿ ಬೆಲೆ ಇದೆ ಎಂದು ನಂಬಿಸಿದ್ದರು. ನಂತರ ನಟೇಶ್ ಮತ್ತು ಸುಕುಮಾರ್ ಎಂಬುವರು ಕಾಂತರಾಜು ಬಳಿ ತಾವು ರೇಡಿಯಸ್ ಕಂಪನಿ ಸಿಇಒಗಳು ಎಂದು ಪರಿಚಯಿಸಿಕೊಂಡಿದ್ದರು. ರಾಮಚಂದ್ರಪ್ಪ ಎಂಬಾತ ಸಿಇಜಿಎಆರ್ಎನ್ ಕಂಪನಿ ಸಿಇಒ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆರೋಪಿಗಳು ರೈಸ್ ಪುಲ್ಲಿಂಗ್ ಚೊಂಬುಗಳನ್ನು ತೋರಿಸಿ ಪರೀಕ್ಷಿಸಿ ಕಾಂತರಾಜುನನ್ನು ನಂಬಿಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ರೈಸ್ ಪುಲ್ಲಿಂಗ್ ಚೊಂಬುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಕೊಡುತ್ತೇವೆ. ಅಲ್ಲಿಯವರೆಗೆ ಸ್ಥಿರಾಸ್ತಿಯನ್ನು ಬರೆದುಕೊಡಬೇಕು ಎಂದು ಹೇಳಿ, ಕಾಂತರಾಜು ಅವರ ಕನಕಪುರ ತಾಲ್ಲೂಕಿನ ಅತ್ತಿಗುಪ್ಪೆ ಗ್ರಾಮದಲ್ಲಿನ 4 ಎಕರೆ 18 ಗುಂಟೆ ಜಮೀನನ್ನು ಸುಕುಮಾರನ್ ಪತ್ನಿ ಸವಿತಾ ಹೆಸರಿಗೆ ಕ್ರಯ ಮಾಡಿಸಿದ್ದರು. ನಂತರ ಆರೋಪಿಗಳು ರೈಸ್ ಪುಲ್ಲಿಂಗ್ ಚೊಂಬುಗಳು ಮಾರಾಟವಾಗಿಲ್ಲ. ಮಾರಾಟಕ್ಕೆ ಮಾರುಕಟ್ಟೆಯಲ್ಲಿ ₹1 ಕೋಟಿ ಹಣ ಠೇವಣಿ ಇರಿಸಬೇಕು ಎಂದು ಥಣಿಸಂದ್ರದ ಕಾಂತರಾಜು ಅವರ ಮನೆಯನ್ನು ರಾಮಚಂದ್ರ ಪಳಸಿಕರನ್ ಹೆಸರಿಗೆ ಬರೆಸಿಕೊಂಡಿದ್ದರು. ನಂತರ ಚೊಂಬುಗಳು ₹100 ಕೋಟಿ ಮಾರಾಟವಾಗಿದೆ ಎಂದು ನಂಬಿಸಿ, ನೆಲಮಂಗಲದ ಸಮೀಪದ 2 ಎಕರೆ 4 ಗುಂಟೆ ಜಮೀನನ್ನು ಗಂಗರಾಜು ಹೆಸರಿಗೆ ಜಿಪಿಎ ಮಾಡಿದ್ದರು. ಬಳಿಕ ಆರೋಪಿಗಳು ಪರಾರಿಯಾಗಿದ್ದರು’ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.