ಬೆಂಗಳೂರು: ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾಾರೆ.

ಬಾಗಲೂರು ಸಮೀಪದ ಬಿ.ಕೆ ಹಳ್ಳಿ ನಿವಾಸಿ ನಾಗೇಶ್ (30) ಬಂಧಿತ. ಶನಿವಾರ ತಡರಾತ್ರಿ ಹೆಡ್ ಕಾನ್ಸ್ಟೆಬಲ್ ಮಲ್ಲಿಕಾರ್ಜನ್ ಮೇಲೆ ಹಲ್ಲೆ ನಡೆಸಿದ್ದ.

ಬಾಗಲೂರಿನ ದಾಳಮ್ಮ ಸರ್ಕಲ್ ಬಳಿ ಟ್ಯಾಕ್ಸಿ ನಿಲುಗಡೆ ವಿಚಾರಕ್ಕೆ ಇಬ್ಬರು ವ್ಯಕ್ತಿಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇದರಿಂದ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಸ್ಥಳಕ್ಕೆ ಬಂದ ಬಾಗಲೂರಿನ ಹೊಯ್ಸಳ ವಾಹನದ ಎಎಸ್ಐ ವಿಶ್ವನಾಥ್ ಮತ್ತು ಹೆಡ್ಕಾನ್ಸ್ಟೆಬಲ್ ಮಲ್ಲಿಕಾರ್ಜನ್ ಗಲಾಟೆ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದರು.

‘ಇದೇ ವೇಳೆ ಆರೋಪಿ ಮಧ್ಯ ಪ್ರವೇಶಿಸಿ, ‘ನಿಮ್ಮನ್ನು ಕರೆದವರು ಯಾರು’ ಎಂದು ಜಗಳ ತೆಗೆದು, ಮಲ್ಲಿಕಾರ್ಜುನ್ ಮೇಲೆ ಹಲ್ಲೆ ನಡೆಸಿದ್ದ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.