ಬೆಂಗಳೂರು: ಆನೆ ದಂತಗಳನ್ನು ಮಾರಲು ಯತ್ನಿಸುತ್ತಿದ್ದ ಆರೋಪದಡಿ ಶ್ರೀಶೈಲ ಎಂಬಾತನನ್ನು ಆರ್.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಜೆ.ಸಿ.ನಗರ ನಿವಾಸಿ ಶ್ರೀಶೈಲ, ಉದ್ಯಮಿಯೊಬ್ಬರ ಮನೆಯಲ್ಲಿ ಉದ್ಯಾನ ನಿರ್ವಹಣೆ ಕೆಲಸ ಮಾಡುತ್ತಿದ್ದ. ಸ್ನೇಹಿತ ಸಮೀವುದ್ದೀನ್ ನೀಡಿದ್ದ ದಂತವನ್ನು ವರ್ಷದಿಂದ ಮನೆಯಲ್ಲಿಟ್ಟುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಯಶವಂತಪುರ ಕೈಗಾರಿಕೆ ಪ್ರದೇಶದ ಉಲ್ಲಾಸ್ ರಸ್ತೆಯಲ್ಲಿ ಆ.10ರಂದು ನಿಂತಿದ್ದು, ಚೀಲದಲ್ಲಿ ಆನೆದಂತಗಳಿದ್ದವು. ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಈತನಿಂದ 7.42 ಕೆ.ಜಿ ತೂಕದ 5 ದಂತಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

‘ಆನೆದಂತಗಳನ್ನು ನೀಡಿದ್ದ ಪ್ರಮುಖ ಆರೋಪಿ ಸಮೀವುದ್ದೀನ್ ವಾಪಸು ಒಯ್ದಿರಲಿಲ್ಲ. ದಂತಗಳನ್ನು ಎಲ್ಲಿಂದ ತರಲಾಗಿತ್ತು ಎಂಬುದು ಸಮೀವುದ್ದೀನ್ ಬಂಧನದ ಬಳಿಕವೇ ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.