ಬೆಂಗಳೂರು: ಕ್ರಯಪತ್ರ ನೋಂದಣಿಗೆ ಪೂರಕವಾಗಿ ಪೂರ್ವ ವಲಯದಲ್ಲಿ ಪರಿಚಯಿಸಿರುವ ಇ–ಆಸ್ತಿ 2 ತಂತ್ರಾಂಶವನ್ನು ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಜಾರಿಗೊಳಿಸಲಾಗುತ್ತದೆ. ಸುಧಾರಿತ ತಂತ್ರಾಂಶದ ಯಶಸ್ಸು ಆಧರಿಸಿ ಎಲ್ಲಾ ವಲಯಗಳಿಗೂ ವಿಸ್ತರಿಸಲಾಗುವುದು. ಆಸ್ತಿ ತೆರಿಗೆ ಸಂಗ್ರಹ ವಿಧಾನ ಪರಿಷ್ಕರಣೆ ಮಾಡಬೇಕಿದ್ದು, ಸ್ವಯಂ ಘೋಷಣೆ ಪತ್ರಗಳನ್ನು ಮುಂದಿನ ಸಾಲಿನಲ್ಲಿ ವಿಶೇಷ ತಪಾಸಣೆಗೆ ಒಳಪಡಿಸಲಾಗುವುದು. ಬೇರೆ ಇಲಾಖೆಗಳ ದಾಖಲೆಗಳೊಡನೆ ಈ ಪತ್ರಗಳನ್ನು ಪರಿಶೀಲಿಸಲಾಗುವುದು. ಇದರಿಂದ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಲಿದೆ. ಸೆಸ್ ಸೇರಿ ₹4,790 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 27ರಷ್ಟು ಹೆಚ್ಚಳ ಆಗಲಿದೆ. ‘ಬಿ’ ಖಾತೆ ನಿವೇಶನಗಳನ್ನು ‘ಎ’ ಖಾತೆಯಾಗಿ ಕ್ರಮಬದ್ಧಗೊಳಿಸಲಾಗುತ್ತಿದ್ದು, ಇದರಿಂದ ಮುಂದಿನ ಸಾಲಿನಲ್ಲಿ ₹800 ಕೋಟಿ ವರಮಾನ ನಿರೀಕ್ಷಿಸಲಾಗಿದೆ.

2 ಸಾವಿರ ಒಂಟಿಮನೆ

₹5 ಲಕ್ಷ ಘಟಕ ವೆಚ್ಚದಲ್ಲಿ ಒಂಟಿ ಮನೆ ಯೋಜನೆಯನ್ನು ವಿಸ್ತರಿಸಿ, ಹೊಸದಾಗಿ 2 ಸಾವಿರ ಮನೆ ನಿರ್ವಿಸಲು ಉದ್ದೇಶಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ ₹100 ಕೋಟಿ ಮೀಸಲಿಟ್ಟಿದೆ. ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ನಗರದಲ್ಲಿ ಸರ್ವೆ ನಡೆಸಲಾಗಿದ್ದು, ಪಟ್ಟಣ ಮಾರಾಟ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2 ರಂತೆ ಬೀದಿ ಬದಿ ವ್ಯಾಪಾರ ವಲಯಗಳನ್ನು ಗುರುತಿಸಲಾಗಿದೆ. ಇವುಗಳನ್ನು ಅಭಿವೃದ್ಧಿಪಡಿಸಲು ₹25 ಕೋಟಿ ಮೊತ್ತ ನಿಗದಿ ಮಾಡಿದೆ.

ಶಿಕ್ಷಣಕ್ಕೆ ₹65 ಕೋಟಿ

‘ಬೆಂಗಳೂರು ಪಬ್ಲಿಕ್ ಸ್ಕೂಲ್’ ಮಾದರಿಯಲ್ಲಿ ಎಲ್ಲ ಶಾಲಾ ಕಾಲೇಜುಗಳ ಗುಣಮಟ್ಟ ವೃದ್ಧಿಗೆ ₹65 ಕೋಟಿಯನ್ನು ಮೀಸಲಿಟ್ಟಿದೆ. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳಿಂದ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನ ಪಡೆಯಲಾಗುವುದು ಎಂದು ಬಜೆಟ್‌ನಲ್ಲಿ ವಿವರಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿ ನಿಯೋಜನೆಗೆ ₹32 ಕೋಟಿ, ವೈದ್ಯಕೀಯ ಉಪಕರಣಗಳ ಖರೀದಿಗೆ ₹6 ಕೋಟಿ ಮತ್ತು ಔಷಧ ಖರೀದಿಗೆ ₹3 ಕೋಟಿ ನಿಗದಿ ಮಾಡಲಾಗಿದೆ. ಪಾಲಿಕೆಯ ಎಲ್ಲಾ 243 ವಾರ್ಡ್‌ಗಳಲ್ಲಿ 61 ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ₹61 ಕೋಟಿ ನಿಗದಿ ಮಾಡಿದೆ. 243 ವಾರ್ಡ್‌ಗಳಲ್ಲೂ ‘ನಮ್ಮ ಕ್ಲಿನಿಕ್’ಗಳು ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಲಾಗಿದೆ.

ಬೆಂಗಳೂರು ಹೆಲ್ತ್ ಸಿಸ್ಟಮ್: ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯ ತಪ್ಪಿಸಲು ಬೆಂಗಳೂರು ವೈದ್ಯಕೀಯ ವ್ಯವಸ್ಥೆ(ಬೆಂಗಳೂರು ಹೆಲ್ತ್ ಸಿಸ್ಟಮ್) ಪ್ರಾರಂಭಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.