ಬೆಂಗಳೂರು: ಆಟೊ ಬುಕ್ ಮಾಡಿ, ರದ್ದುಗೊಳಿಸಿದ ಮಹಿಳೆಯನ್ನು ಆಟೊ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೆ, ಆಟೊ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.

ಆಟೊ ಚಾಲಕ ಮುತ್ತುರಾಜ್ ಎಂಬಾತನನ್ನು ಕರೆಯಿಸಿ, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಗೂ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್ ’ನಲ್ಲಿ ಸಿಟಿಜನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ಎಂಬ ಖಾತೆಯಿಂದ ಆಟೊ ಚಾಲಕ ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳುಳ್ಳ ವಿಡಿಯೊ ತುಣುಕುಗಳನ್ನು ಪೋಸ್ಟ್ ಮಾಡಿ, ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.

ಆ್ಯಪ್ನಲ್ಲಿ ಆಟೊ ಬುಕ್ ಮಾಡಿ, ನಂತರ ರದ್ದುಗೊಳಿಸಿ ಮತ್ತೊಂದು ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಚಾಲಕ ಹಿಂಬಾಲಿಸಿಕೊಂಡು ಹೋಗಿ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ದೃಶ್ಯ ವಿಡಿಯೊದಲ್ಲಿದೆ.

ವಿಡಿಯೊದಲ್ಲಿರುವ ಮಹಿಳೆ ಹಿಂದಿಯಲ್ಲಿ ಮಾತನಾಡುತ್ತಿದ್ದು, ‘ತಾನು ಆಟೊ ಬುಕ್ ಮಾಡಿ ರದ್ದು ಮಾಡಿದ್ದರಲ್ಲಿ ಏನು ತಪ್ಪಿದೆ? ನಿಮಗೆ ಬೇಡವಾದಲ್ಲಿ ರದ್ದು ಮಾಡುತ್ತೀರಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಆಟೊ ಚಾಲಕ, ‘ಆಟೊ ಗ್ಯಾಸ್ನ ದುಡ್ಡು ನಿಮ್ಮ ಅಪ್ಪ ಕೊಡುತ್ತಾನಾ’ ಎಂದು ಬೈದಿದ್ದಾನೆ.

‘ಯಾಕೆ ಕಿರುಚುತ್ತಿದ್ದೀರಿ. ಪೊಲೀಸರಿಗೆ ದೂರು ಕೊಡುವೆ’ ಎಂದು ಆಕೆ ಹೇಳಿದಾಗ, ‘ಪೊಲೀಸ್ ಠಾಣೆಗೆ ಹೋಗೋಣ’ ಎಂದು ಚಾಲಕ ದಬಾಯಿಸಿದ್ದಾನೆ. ‘ನಿಮ್ಮ ಜೊತೆ ಯಾಕೆ ಬರಬೇಕು. ನಿಮ್ಮ ನಂಬರ್ ನನ್ನ ಬಳಿ ಇದೆ, ದೂರು ನೀಡುವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಆಗ ಚಾಲಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಸ್ಥಳದಲ್ಲಿದ್ದ ಮತ್ತೊಬ್ಬ ಆಟೊ ಚಾಲಕ ಮತ್ತು ಸಾರ್ವಜನಿಕರು, ಜಗಳ ಆಡುವುದು ಬೇಡ ಎಂದು ಹೇಳಿದರೂ ಆತ ಸುಮ್ಮನಾಗಲಿಲ್ಲ.

ಆಟೊ ಚಾಲಕನ ಅಸಭ್ಯ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ತಮಗೂ ಇಂತಹ ಕೆಟ್ಟ ಅನುಭವಗಳಾಗಿವೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ‘ ಆಟೊ ಚಾಲಕ ಯುವತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಒಪ್ಪುವಂತಹದಲ್ಲ. ಇಂತಹ ಕೆಲ ಆಟೊ ಚಾಲಕರು ಎಲ್ಲರಿಗೂ ಕೆಟ್ಟ ಹೆಸರು ತರುತ್ತಾರೆ. ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.