ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಿ
Published 22 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗದಿರಬಹುದು. ಕೆಲಸಗಳು ವಿಳಂಬವಾಗಿಯಾದರೂ ದಿನದ ಅಂತ್ಯದಲ್ಲಿ ಪೂರ್ಣಗೊಳ್ಳಲಿವೆ.
ವೃಷಭ
ಸರ್ವರಂಗದಲ್ಲೂ ಜಯಶಾಲಿಯಾಗುವ ಯೋಗವಿದೆ. ರಾಜಕೀಯ ವರ್ಗದವರಿಗೆ ಹೆಚ್ಚಿನ ಮನ್ನಣೆ, ಸ್ಥಾನಮಾನಗಳು ಸಿಗಲಿವೆ. ಸಜ್ಜನರ ಒಡನಾಟದಿಂದ ಶ್ರೇಯೋಭಿವೃದ್ಧಿ ಉಂಟಾಗಲಿದೆ.
ಮಿಥುನ
ದೈವಾನುಗ್ರಹದಿಂದ ಸಂತಾನ ಭಾಗ್ಯ ಪ್ರಾಪ್ತವಾಗಲಿದ್ದು, ಮನೆಯಲ್ಲಿ ಸಂಭ್ರಮ ಸಡಗರದ ವಾತಾವರಣ ಸೃಷ್ಟಿಯಾಗಲಿದೆ. ವೃತ್ತಿಯಲ್ಲಿ ಅನ್ಯರ ಸಹಾಯ ಅಪೇಕ್ಷಿಸುವುದಕ್ಕಿಂತ ಸ್ವಸಾಮರ್ಥ್ಯವನ್ನು ಪ್ರದರ್ಶಿಸಿ.
ಕರ್ಕಾಟಕ
ಹಿಂದಿನ ಜೀವನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದ ರಿಂದ ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವುದು.
ಸಿಂಹ
ಮುಂಜಾನೆ ಏಳುವಾಗಲೇ ನೀವು ಉತ್ಸಾಹಿಗಳಾಗಿರುತ್ತೀರಿ. ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ವೃತ್ತಿಪರವಾಗಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಉತ್ತಮ.
ಕನ್ಯಾ
ಸಾಗರೋತ್ಪನ್ನ ವಸ್ತುಗಳ ಮಾರಾಟಗಾರರು ವೃತ್ತಿಯಲ್ಲಿ ಜಾಗರೂಕರಾಗಿರಿ. ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆ ಗಳಲ್ಲಿ ಭಾಗಿಯಾಗುವ ಸಂದರ್ಭ ಎದುರಾಗಲಿದೆ. ತಾಳ್ಮೆ ಅತ್ಯಗತ್ಯ.
ತುಲಾ
ವ್ಯಾಪಾರದ ಅಭಿವೃದ್ಧಿಗೆ ವಿವಿಧ ಉಪಾಯಗಳನ್ನು ಬಳಸುವುದು ಒಳ್ಳೆಯದು. ಆತ್ಮವಿಶ್ವಾಸ ಹಾಗೂ ಧನಾತ್ಮಕ ಮನೋಭಾವಗಳು ಗೆಲುವಿಗೆ ಕಾರಣವಾಗಲಿವೆ.
ವೃಶ್ಚಿಕ
ಆರಕ್ಷಕರಿಗೆ ಅಥವಾ ಭದ್ರತಾ ಪಡೆಯವರಿಗೆ ಕಾರ್ಯದೊತ್ತಡ ಹೆಚ್ಚಲಿದೆ. ವೃತ್ತಿಯಲ್ಲಿ ನಿಮ್ಮಿಂದ ತಪ್ಪುಗಳಾಗುವ ಸಂಭವವಿದ್ದು, ಹೆಚ್ಚಿನ ಜಾಗ್ರತೆ ವಹಿಸಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯವಾಗಲಿದೆ.
ಧನು
ಮೇಲಧಿಕಾರಿಗಳ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗುವಿರಿ. ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಹೆಚ್ಚಿನ ಶ್ರೇಯೋಭಿವೃದ್ಧಿ ಪಡೆಯಲು ಕಾರಣವಾಗುವುದು.
ಮಕರ
ಜೀವನದ ಕುರಿತಾದ ನಿರುತ್ಸಾಹದಿಂದ ಹೊರಬಂದು ಹೆಚ್ಚಿನ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಿರಿ. ಮನಸ್ಸಿಗೆ ಮುದ ತರುವ ಸಂಗತಿಗಳು ಜರುಗಲಿವೆ. ಧಾರ್ಮಿಕ ಕೆಲಸ ಕಾರ್ಯಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ.
ಕುಂಭ
ಹಿರಿಯರಾದವರ ಸಲಹೆಗಳನ್ನು ಪಡೆದುಕೊಂಡು ಕಾರ್ಯಪ್ರವೃತ್ತರಾಗುವುದು ಉತ್ತಮ. ಕೌಟುಂಬಿಕವಾಗಿ ಎಲ್ಲರೊಂದಿಗೂ ಪೂಜಾ ಸಮಾರಂಭದಲ್ಲಿ ಭಾಗಿಯಾಗುವಿರಿ.
ಮೀನ
ಲೋಹದ ವಸ್ತು ಮಾರಾಟಗಾರರಿಗೆ ಹೆಚ್ಚಿನ ಲಾಭವಾಗಲಿದೆ. ನಿರಂತರ ಧನ ಸಂಪಾದನೆಯಿಂದ ಆತ್ಮಸ್ಥೈರ್ಯ ವೃದ್ಧಿಯಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲ. ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ.
ADVERTISEMENT
ADVERTISEMENT