ಬೆಂಗಳೂರು: ನಗರ ಪೊಲೀಸರ ಹೆಸರಿನಲ್ಲಿ ನಕಲಿ ‘ಎಕ್ಸ್ ಟ್ವಿಟರ್’ ಖಾತೆ ಸೃಷ್ಟಿಸಿ, ಅದರಲ್ಲಿ ಐಪಿಎಲ್ ಪಂದ್ಯಗಳ ಸ್ಕೋರ್ ಹಾಗೂ ಮತ್ತಿತರ ಮಾಹಿತಿ ಟ್ವೀಟ್ ಮಾಡಿ ಪೊಲೀಸರಂತೆ ಬಿಂಬಿಸುತ್ತಿದ್ದ ತಮಿಳುನಾಡಿನ ವ್ಯಕ್ತಿಯನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ಚೆಟಪೇಟ್ನ ಮಗೇಶ್ ಕುಮಾರ್ ಬಂಧಿತ ಆರೋಪಿ. ‘ಪ್ರಕರಣ ದಾಖಲಾದ ಮೇಲೆ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ತಂತ್ರಜ್ಞಾನದ ನೆರವಿನಿಂದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘https://twitter.com/BlrCityPolice ನಗರ ಪೊಲೀಸರ ಅಸಲಿ ಖಾತೆಯಾಗಿದೆ. ಆದರೆ, ಆರೋಪಿಯು https://twitter.com/BlrCityPolicee ಅನ್ನು ತೆರೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ. ನಗರ ಪೊಲೀಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.