ಬೆಂಗಳೂರು: ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ‘ರಾಜಾಜಿನಗರ’, ಹಲವು ಪ್ರೇಕ್ಷಣೀಯ ಹಾಗೂ ವಾಣಿಜ್ಯ ಸ್ಥಳಗಳ ತಾಣ. ಇಸ್ಕಾನ್ ದೇವಸ್ಥಾನ, ವಿಶ್ವ ವ್ಯಾಪಾರ ಕೇಂದ್ರ ಹಾಗೂ ಹಲವು ವಿಶೇಷತೆಗಳ ಮೂಲಕ ಚಿರಪರಿಚಿತವಾದ ಪ್ರದೇಶವೂ ಹೌದು. ಇಂಥ ‘ರಾಜಾಜಿನಗರ’ ನಿರ್ಮಾಣ ಕಥೆ ಹೇಳುವ ‘ಸ್ತಂಭ’ಕ್ಕೀಗ 72 ವರ್ಷ.

ಇಂದು ಬೃಹತ್ ಆಕಾರದಲ್ಲಿ ಬೆಳೆದಿರುವ ರಾಜಾಜಿನಗರ, ಮೈಸೂರಿನ ರಾಜ ಜಯಚಾಮರಾಜೇಂದ್ರ ಅವರ ಜನಸೇವೆಗೆ ನಿದರ್ಶನ. ರಾಜಾಜಿನಗರ ನಿರ್ಮಿಸಿದ ಸವಿನೆನಪಿನ ಅಡಿಗಲ್ಲಾಗಿ ಸ್ತಂಭವನ್ನು ಒಡೆಯರ ಅವರು ನಿರ್ಮಿಸಿದ್ದು, ಈ ಸ್ಥಳವನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೊ ನಿಲ್ದಾಣದ ಎದುರಿನ ರಾಜಾಜಿನಗರ ಫೌಂಡೇಷನ್ ಉದ್ಯಾನದಲ್ಲಿ ಸ್ತಂಭವಿದೆ. ‘ರಾಜಾಜಿ’ ಹೆಸರಿನಿಂದ ಆರಂಭವಾದ ಪ್ರದೇಶ, ‘ರಾಜಾಜಿನಗರ’ ಆಗಿ ಮಾರ್ಪಟ್ಟ ಇತಿಹಾಸವನ್ನು ಈ ಸ್ತಂಭ ತಿಳಿಸುತ್ತಿದೆ.

9ನೇ ಪಟ್ಟಾಭಿಷೇಕದ ಕೊಡುಗೆ: ಜನಪರವಾಗಿದ್ದ ಜಯಚಾಮರಾಜೇಂದ್ರ ಅವರು, ಶಾಶ್ವತವಾಗಿ ಉಳಿಯುವ ಯೋಜನೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ತಮ್ಮ ಪಟ್ಟಾಭಿಷೇಕದ 8ನೇ ವರ್ಷದ ನೆನಪಿನಲ್ಲಿ ಜಯನಗರ ನಿರ್ಮಿಸಿ, ಅದರ ಉದ್ಘಾಟನೆಗೆ ಅಶೋಕ ಸ್ತಂಭ ನಿಲ್ಲಿಸಿದ್ದರು. 1948ರಲ್ಲಿ ನಿರ್ಮಿಸಿದ್ದ ಸ್ತಂಭ ಇಂದು ಪ್ರವಾಸ ಸ್ಥಳವಾಗಿದೆ.

ಪಟ್ಟಾಭಿಷೇಕದ 9ನೇ ವರ್ಷದ ನೆನಪಿನಲ್ಲಿ 1,000 ಎಕರೆ ವಸತಿ ಪ್ರದೇಶ ಹಾಗೂ 500 ಎಕರೆ ಕೈಗಾರಿಕಾ ಪ್ರದೇಶ ನಿರ್ಮಿಸಲು ಜಯಚಾಮರಾಜೇಂದ್ರ ಒಡೆಯರ್ ತೀರ್ಮಾನಿಸಿದ್ದರು. ಅದರ ಫಲವಾಗಿಯೇ 1949ರಲ್ಲಿ ರಾಜಾಜಿನಗರ ನಿರ್ಮಾಣ ಶುರುವಾಯಿತೆಂದು ಇತಿಹಾಸ ತಜ್ಞರು ಹೇಳುತ್ತಾರೆ.

ಅಂದಿನ ಭಾರತದ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿ ಹೆಸರನ್ನು ಈ ಪ್ರದೇಶಕ್ಕೆ ಇರಿಸಲು ಒಡೆಯರ್ ಇಚ್ಛಿಸಿದ್ದರು. ‘ರಾಜಾಜಿ’ ಎಂಬುದು ರಾಜಗೋಪಾಲಾಚಾರಿ ಅವರ ಮತ್ತೊಂದು ಹೆಸರಾಗಿತ್ತು. ಅದನ್ನೇ ಅವರು ಆ ಪ್ರದೇಶಕ್ಕೆ ನಾಮಕರಣ ಮಾಡಿದರು. ನಗರ ಬೆಳೆದಂತೆ, ‘ರಾಜಾಜಿ’ ಎಂಬ ಹೆಸರು ‘ರಾಜಾಜಿನಗರ’ ಆಗಿ ಮಾರ್ಪಟ್ಟಿದೆ.

ಉದ್ಯಾನದಲ್ಲಿ ಪ್ರವೇಶ: ಸ್ತಂಭ ಇರುವ ಜಾಗವನ್ನು ಅಭಿವೃದ್ಧಿಪಡಿಸಿ ಉದ್ಯಾನ ಮಾಡುವ ಕೆಲಸ ಪ್ರಗತಿಯಲ್ಲಿದೆ. ಈ ಭಾಗದಲ್ಲಿ ಹಾದು ಹೋಗುವ ಸಾರ್ವಜನಿಕರು, ಉದ್ಯಾನದೊಳಗೆ ಪ್ರವೇಶಿಸಿ ಸ್ತಂಭ ವೀಕ್ಷಿಸಲೂ ಅವಕಾಶವಿದೆ.

ರಾಜಾಜಿನಗರ ನಿರ್ಮಾಣ ಕೆಲಸದ ಉದ್ಘಾಟನೆಗಾಗಿ ನಿಲ್ಲಿಸಿರುವ ಈ ಸ್ತಂಭ, ನಮ್ಮ ಬೆಂಗಳೂರಿನ ಹೆಮ್ಮೆಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.