ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಸ್ನೇಹಿತೆಯನ್ನು ಹತ್ತಿಸಿಕೊಂಡು ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿದ್ದ ಆರೋಪದಡಿ ನೂರ್ ಅಹ್ಮದ್ (21) ಎಂಬಾತನನ್ನು ಹೆಬ್ಬಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ.

’ಬಿ.ಕಾಂ ವಿದ್ಯಾರ್ಥಿ ಆಗಿರುವ ನೂರ್ ಅಹ್ಮದ್, ಇತ್ತೀಚೆಗೆ ಸ್ನೇಹಿತೆ ಜೊತೆ ನಂದಿ ಬೆಟ್ಟಕ್ಕೆ ಹೋಗಿದ್ದ. ಅಲ್ಲಿಂದ ವಾಪಸ್ ಬರುವಾಗ ರಸ್ತೆಯಲ್ಲೇ ವ್ಹೀಲಿಂಗ್ ಮಾಡಿದ್ದ. ಆ ದೃಶ್ಯವನ್ನು ಸ್ನೇಹಿತೆಯ ಪರಿಚಯಸ್ಥನೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ಆ ವಿಡಿಯೊವನ್ನು ಸ್ನೇಹಿತೆಯೇ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಳು’ ಎಂದು ಪೊಲೀಸರು ಹೇಳಿದರು.

‘ವಿಡಿಯೊ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

ಸ್ನೇಹಿತನ ತಾಯಿಯ ವಾಹನ: ‘ಯಲಹಂಕದ ಕಾಲೇಜಿನಲ್ಲಿ ಓದುತ್ತಿರುವ ನೂರಅಹ್ಮದ್, ಸ್ನೇಹಿತ ಇಮ್ರಾನ್ ಎಂಬುವರ ತಾಯಿಯ ಹೆಸರಿನಲ್ಲಿ ನೋಂದಣಿಯಾಗಿದ್ದ ದ್ವಿಚಕ್ರ ವಾಹನವನ್ನು ಪಡೆದುಕೊಂಡು ನಂದಿ ಬೆಟ್ಟಕ್ಕೆ ಹೋಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸ್ನೇಹಿತೆಯು ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದಳು. ಆಕೆಯ ಜೊತೆಗೆಯೇ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿದ್ದ. ಇತರೆ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿತ್ತು’ ಎಂದರು.

‘ದ್ವಿಚಕ್ರ ವಾಹನ ನೀಡಿದ ಆರೋಪದಡಿ ಸ್ನೇಹಿತ ಇಮ್ರಾನ್ ಹಾಗೂ ಅವರ ತಾಯಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡಿದ್ದು, ಸದ್ಯದಲ್ಲೇ ಪ್ರಕರಣವನ್ನು ಆ ಠಾಣೆಗೆ ವರ್ಗಾಯಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.