ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯ 2024ನೇ ಸಾಲಿನ ‘ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದ್ದು, ಇಂದ್ರಕುಮಾರ್ ಎಚ್.ಬಿ. ಅವರ ‘ಅಂತ್ಯವಾಗದು ಕಥೆ’ ಪ್ರಥಮ ಬಹುಮಾನ ಪಡೆದಿದೆ.

ಶನಿವಾರ ಇಲ್ಲಿ ನಡೆದ ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಫಲಿತಾಂಶ ಘೋಷಿಸಲಾಯಿತು. ಪ್ರಥಮ ಬಹುಮಾನವು ₹ 50 ಸಾವಿರ ನಗದು ಒಳಗೊಂಡಿದೆ. ವಿನಾಯಕ ಅರಳಸುರಳಿ ಅವರ ‘ಪ್ಯಾಸೆಂಜರ್ ನೇಮ್ ನವರೋಜಿ’ ದ್ವಿತೀಯ (₹ 25 ಸಾವಿರ) ಹಾಗೂ ಪೂರ್ಣಿಮಾ ಮಾಳಗಿಮನಿ ಅವರ ‘ಒಂದು ಕಹಿ ಸುದ್ದಿಯ ನಿರೀಕ್ಷೆಯಲ್ಲಿ’ ಕಥೆಯು ತೃತೀಯ (₹ 15 ಸಾವಿರ) ಬಹುಮಾನಕ್ಕೆ ಭಾಜನವಾಯಿತು.

ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರ ‘ಅಚ್ಯುತನ ಧ್ಯಾನ’, ಸಲೀಮ ನದಾಫ ಅವರ ‘ಮಾಂತ್ ಮಲ್ಲಯ್ಯಾಘೇ’, ಸಚಿನ್ ತೀರ್ಥಹಳ್ಳಿ ಅವರ ‘ಸೆಕ್ಸ್ ಆನ್ ದಿ ಬೀಚ್’, ದೀಪ್ತಿ ಭದ್ರಾವತಿ ಅವರ ‘ಟವರ್ ಆಫ್ ಲೈಸೆನ್ಸ್’ ಹಾಗೂ ಅನುರಾಧ ಪಿ.ಎಂ. ಅವರ ‘ಆ ಎರಡು ಪುಟಗಳು’ ಕಥೆಗಳು ಸಮಾಧಾನಕರ ಬಹುಮಾನ (ತಲಾ ₹ 5 ಸಾವಿರ) ಪಡೆದುಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.