ಬೆಂಗಳೂರು: ‘2024ರ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ವು ಆಗಸ್ಟ್ 9ರಿಂದ 11ರವರೆಗೆ ಬೆಂಗಳೂರಿನ ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ನಡೆಯಲಿದೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಬುಕ್ ಬ್ರಹ್ಮ ಸಂಸ್ಥೆಯು ಆಯೋಜಿಸಿರುವ ಉತ್ಸವದಲ್ಲಿ ಕನ್ನಡ, ಮಲಯಾಳಂ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಯ ಸಾಹಿತಿಗಳಾದ ಕೆ. ಸಚ್ಚಿದಾನಂದನ್, ಪೌಲ್ ಝಕಾರಿಯ, ಬಿ. ಜಯಮೋಹನ್, ಪೆರುಮಾಳ್ ಮುರುಗನ್, ಬೆನ್ಯಮಿನ್ ವೋಲ್ಗ, ಎಚ್.ಎಸ್. ಶಿವಪ್ರಸಾದ್, ವಿವೇಕ ಶಾನಭಾಗ, ಗಿರೀಶ್ ಕಾಸರವಳ್ಳಿ, ಮಮತಾ ಸಾಗರ್, ಎಸ್.ಜಿ. ವಾಸುದೇವ ಸೇರಿದಂತೆ ಸುಮಾರು 300 ಸಾಹಿತಿಗಳು, ಕಲಾವಿದರು ಭಾಗವಹಿಸಲಿದ್ದಾರೆ. 80ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ‘ಪ್ರಸ್ತುತ ಕಾಲಘಟ್ಟ, ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಂಡರೆ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ಅತ್ಯಂತ ಪ್ರಸ್ತುತ ಮತ್ತು ಅಗತ್ಯವಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಗಳ ಕೊಡುಗೆ ಅಪಾರವಾಗಿದೆ. ನಾಲ್ಕು ಭಾಷಿಕರನ್ನು ಒಂದೇ ವೇದಿಕೆಗೆ ಕರೆ ತಂದು ಪರಸ್ಪರ ಸಂವಾದ ಮಾಡಲು ಅನುಕೂಲ ಮಾಡಿಕೊಡುವುದು ಈ ಉತ್ಸವದ ಉದ್ದೇಶವಾಗಿದೆ’ ಎಂದರು.

‘ನಾಲ್ಕು ಭಾಷೆಗಳವರನ್ನು ಒಗ್ಗೂಡಿಸುವ ಇಂತಹ ಒಂದು ಪ್ರಯತ್ನ ಇದುವರೆಗೆ ದೇಶದಲ್ಲಿ ನಡೆದಿಲ್ಲ. ಈ ಉತ್ಸವ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ. ಸಾಹಿತಿಗಳ ಜೊತೆಗೆ ದಕ್ಷಿಣ ಭಾರತದ ಪ್ರಕಾಶಕರ ಒಗ್ಗೂಡುವಿಕೆ ಕೂಡ ಇಲ್ಲಿ ಆಗಲಿದೆ. ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದ ಪ್ರತಿನಿಧಿಗಳು ದಕ್ಷಿಣ ಭಾರತದ ಪ್ರಕಾಶಕರ ಜೊತೆ ದುಂಡು ಮೇಜಿನ ಸಭೆ ನಡೆಸಲಿದ್ದಾರೆ’ ಎಂದು ವಿವರಿಸಿದರು.

‘ಈ ಉತ್ಸವದ ಪ್ರತಿನಿಧಿಗಳ ಉಚಿತ ನೋಂದಣಿ ಪ್ರಾರಂಭವಾಗಿದೆ. ಆಸಕ್ತರು www.bookbrahmalitfest.comಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಪಾಸ್ ಹೊಂದಿದವರಿಗೆ ಮಾತ್ರ ಸಾಹಿತ್ಯ ಉತ್ಸವದ ಗೋಷ್ಠಿಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ’ ಎಂದರು.

ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ಉತ್ಸವದ ನಿರ್ದೇಶಕ ಸತೀಶ್ ಚಪ್ಪರಿಕೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.