ಬೆಂಗಳೂರು: ತಮಿಳುನಾಡು ಮತ್ತು ಕರ್ನಾಟಕದ 28 ಜಿಲ್ಲೆಗಳ ಕಾವೇರಿ ಜಲಾನಯನ ಪ್ರದೇಶದಲ್ಲಿ ನಡೆಯಲಿರುವ ‘ಕಾವೇರಿ ಕೂಗು’ ಆಂದೋಲನದ ಭಾಗವಾಗಿ ವಾಹನಗಳ ರ‍್ಯಾಲಿ ಬುಧವಾರ ಆರಂಭವಾಯಿತು.

ಕೊಯಮತ್ತೂರು ಸಮೀಪದ ವೆಳ್ಳಯ್ಯನಗಿರಿ ಬೆಟ್ಟದ ತಪ್ಪಲಿನಲ್ಲಿರುವ 112 ಅಡಿ ಎತ್ತರದಆದಿಯೋಗಿ ಪ್ರತಿಮೆ ಬಳಿಈಶ ಫೌಂಡೇಷನ್‌ನ ಜಗ್ಗಿ ವಾಸುದೇವ್ (ಸದ್ಗುರು) ಚಾಲನೆ ನೀಡಿದರು.

ರ‍್ಯಾಲಿ ವೇಳೆ ಕಾವೇರಿ ನದಿ ಪಾತ್ರದ ಪ್ರತಿಹಳ್ಳಿಯಲ್ಲೂ ಜಾಗೃತಿ ಮೂಡಿಸಲಾಗುತ್ತದೆ. ಒಂದು ತಿಂಗಳ ಈ ಆಂದೋಲನದಲ್ಲಿ ಎರಡೂ ರಾಜ್ಯಗಳ ಸಾವಿರಾರು ರೈತರನ್ನು ತಲುಪುವ ನಿರೀಕ್ಷೆ ಹೊಂದಲಾಗಿದೆ. ಕೃಷಿ ಅರಣ್ಯದಿಂದ ಆಗಲಿರುವ ಪರಿಸರ ಮತ್ತು ಆರ್ಥಿಕ ಅನುಕೂಲವನ್ನು ವಿಡಿಯೊ ಕ್ಲಿಪ್, ನೇರ ಸಂವಾದ ಮತ್ತು ಕರಪತ್ರಗಳ ಮೂಲಕ ತಜ್ಞರು ರೈತರಿಗೆ ತಿಳಿಸಲಿದ್ದಾರೆ.

ಜಲಾನಯನ ಪ್ರದೇಶದಲ್ಲಿ ರೈತರ ಮೂಲಕ 242 ಕೋಟಿ ಮರಗಳನ್ನು ಬೆಳೆಸುವ ಉದ್ದೇಶವನ್ನು ಅಭಿಯಾನ ಹೊಂದಿದೆ. ಅರಣ್ಯ ಕೃಷಿಯು ಮಣ್ಣಿನ ಫಲವತ್ತತೆ ಹೆಚ್ಚಿಸುವ ಜತೆಗೆ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. 5ರಿಂದ 8 ವರ್ಷಗಳ ಅವಧಿಯಲ್ಲಿ ಕೃಷಿಕರು ಆರ್ಥಿಕವಾಗಿ ಸಮೃದ್ಧರಾಗುತ್ತಾರೆ ಎಂಬುದನ್ನೂ ತಜ್ಞರು ವಿವರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.