ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್‌ಪೇಟೆ | 'ರೈತರ ನೆರವಿಗೆ ನಿಂತ ಸಹಕಾರ ಸಂಘಗಳು’

Published : 19 ಸೆಪ್ಟೆಂಬರ್ 2024, 16:22 IST
Last Updated : 19 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments

ದಾಬಸ್‌ಪೇಟೆ: ‘ಸಹಕಾರ ಸಂಘ ರೈತರ ನೆರವಿಗೆ ಸ್ಥಾಪನೆಯಾಗಿದ್ದು, ಅದರ ಅಭಿವೃದ್ಧಿಗೆ ರೈತರು ಸಹಕಾರ ನೀಡಬೇಕು. ಆಗ ಸಂಘವು ಅಭಿವೃದ್ದಿಯಾಗುತ್ತದೆ’ ಎಂದು ಕಂಬಾಳು ಗ್ರಾಮದಲ್ಲಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ಪ್ರಭುದೇವ ತಿಳಿಸಿದರು.

ಸಂಘದ 2023-2024ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮಿಣ ಭಾಗದ ರೈತರಿಗೆ ಸಹಕಾರ ಸಂಘಗಳಿಂದ ಅನುಕೂಲವಾಗುತ್ತದೆ. ಸಹಕಾರ ಸಂಘಕ್ಕೆ ಸದಸ್ಯರೇ ಮಾಲೀಕರಾಗಿದ್ದಾರೆ. ಸಂಘವನ್ನು ಒಗ್ಗೂಡಿ ಮುನ್ನಡೆಸಿಕೊಂಡು ಹೋಗೋಣ. ಸಹಕಾರ ಸಂಘದಲ್ಲಿ ರಾಜಕೀಯ ಬೆರೆಸಿದರೆ ಸಂಘದ ಮೂಲ ಉದ್ದೇಶವೇ ಬದಲಾಗುತ್ತದೆ’ ಎಂದು ರೈತರಿಗೆ ಹೇಳಿದರು.

ಸಂಘದ ಮಾಜಿ ಅಧ್ಯಕ್ಷ ಎಸ್.ಸಿ.ಹೊನ್ನಗಂಗಶೆಟ್ಟಿ, ಉಪಾಧ್ಯಕ್ಷ ನಂಜಪ್ಪ, ನಿರ್ದೇಶಕರಾದ ಜಿ.ಆರ್.ನಾರಾಯಣಪ್ಪ, ಆರ್.ಶಿವರುದ್ರಯ್ಯ, ಮಲ್ಲೇಶಯ್ಯ, ಎಸ್.ರೇಣುಕಾಪ್ರಸಾದ್, ಹನುಮಂತರಾಯಪ್ಪ, ಬೈಲನರಸಿಂಹಮೂರ್ತಿ, ಪಾಜೀಲಾ ಭಾನು, ಭಾಗ್ಯಮ್ಮ ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ, ಮೇಲ್ವಿಚಾರಕ ನರಸಿಂಹಮೂರ್ತಿ, ಮಾರಾಟ ಮತ್ತು ನಗದು ಗುಮಾಸ್ತೆ ಎಸ್.ಕೆ.ಚಂದ್ರಕಲಾ, ಮಾರಾಟ ಗುಮಾಸ್ತ ಎಸ್.ಮಂಜುನಾಥ, ಸಹಾಯಕ ಗಂಗಾಧರಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT