ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್ ಟ್ರೊಫಿ: ಭಾರತ ಡಿ ತಂಡದ ಉತ್ತಮ ಮೊತ್ತ

ಶ್ರೇಯಸ್‌ ಅಯ್ಯರ್ ಮತ್ತೆ ವಿಫಲ
Published : 19 ಸೆಪ್ಟೆಂಬರ್ 2024, 16:21 IST
Last Updated : 19 ಸೆಪ್ಟೆಂಬರ್ 2024, 16:21 IST
ಫಾಲೋ ಮಾಡಿ
Comments

ಅನಂತಪುರ: ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿರುವ ಶ್ರೇಯಸ್‌ ಅಯ್ಯರ್ ಸತತ ಎರಡನೇ ಬಾರಿ ಸೊನ್ನೆಗೆ ನಿರ್ಗಮಿಸಿದರು. ಆದರೆ ಇತರ ಬ್ಯಾಟರ್‌ಗಳ ಉಪಯುಕ್ತ ಬ್ಯಾಟಿಂಗ್‌ನಿಂದ ಭಾರತ ‘ಡಿ’ ತಂಡವು ಗುರುವಾರ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್‌ ಲೀಗ್ ಪಂದ್ಯದಲ್ಲಿ ಭಾರತ ‘ಬಿ’ ವಿರುದ್ಧ 5 ವಿಕೆಟ್‌ಗೆ 306 ರನ್‌ಗಳ ಉತ್ತಮ ಮೊತ್ತ ಗಳಿಸಿತು.

ನಾಯಕ ವಿಫಲನಾದರೂ, ಆರಂಭ ಆಟಗಾರರಾದ ದೇವದತ್ತ ಪಡಿಕ್ಕಲ್‌ (50), ಶ್ರೀಕರ್‌ ಭರತ್ (52), ರಿಕಿ ಭುಯಿ (56) ಮತ್ತು ವಿಕೆಟ್‌ ಕೀಪರ್ ಸಂಜು ಸ್ಯಾಮ್ಸನ್ (ಔಟಾಗದೇ 89, 83ಎ, 4x10, 6x3) ಅವರು ತಂಡದ ನೆರವಿಗೆ ನಿಂತರು.

ಪಡಿಕ್ಕಲ್ ಮತ್ತು ಭರತ್ ಮೊದಲ ವಿಕೆಟ್‌ಗೆ 105 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಇಬ್ಬರೂ ಕ್ರಮವಾಗಿ ನವದೀಪ್ ಸೈನಿ ಮತ್ತು ಮುಕೇಶ್ ಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಎನ್‌.ಜಗದೀಶನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ದಿನದಾಟ ಮುಗಿದಾಗ, ಸಂಜು ಜೊತೆ ಸಾರಾಂಶ್ ಜೈನ್ (ಔಟಾಗದೇ 26) ಅಜೇಯರಾಗುಳಿದಿದ್ದು, ಮುರಿಯದ ಆರನೇ ವಿಕೆಟ್‌ಗೆ 90 ರನ್ ಪೇರಿಸಿದ್ದಾರೆ. ಸಂಜು ಆಕ್ರಮಣಕಾರಿಯಾಗಿ ಆಡಿದರು.

ರೂರಲ್‌ ಡೆಲವಪ್‌ಮೆಂಟ್‌ ಟ್ರಸ್ಟ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದಿದ್ದ ಭಾರತ ‘ಬಿ’ ತಂಡದ ಕಡೆ ಲೆಗ್‌ ಸ್ಪಿನ್ನರ್ ರಾಹುಲ್ ಚಾಹರ್ 60 ರನ್ನಿಗೆ 3 ವಿಕೆಟ್ ಪಡೆದು ಮಿಂಚಿದರು. ಇದರಲ್ಲಿ ಶ್ರೇಯಸ್‌ ವಿಕೆಟ್ ಸೇರಿತ್ತು. ಅಯ್ಯರ್‌ ಐದು ಇನಿಂಗ್ಸ್‌ಗಳಲ್ಲಿ ಗಳಿಸಿದ್ದು 104 ರನ್‌ಗಳನ್ನಷ್ಟೇ.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್‌: ಭಾರತ ‘ಡಿ’: 77 ಓವರುಗಳಲ್ಲಿ 5ಕ್ಕೆ 306 (ದೇವದತ್ತ ಪಡಿಕ್ಕಲ್ 50, ಶ್ರೀಕರ ಭರತ್ 52, ರಿಕಿ ಭುಯಿ 56, ಸಂಜು ಸ್ಯಾಮ್ಸನ್‌ ಔಟಾಗದೇ 89; ರಾಹುಲ್ ಚಾಹರ್ 60ಕ್ಕೆ3) ವಿರುದ್ಧ ಭಾರತ ‘ಬಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT