ಚೆನ್ನೈ: ಇಲ್ಲಿಯ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ‘ಸೂಪರ್ ಹೀರೊ’ ಗಳಂತೆ ಕಂಗೊಳಿಸಿದರು.

ಇಲ್ಲಿ ಆರಂಭವಾದ ಬಾಂಗ್ಲಾದೇಶ ಎದುರಿನ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಾಟದಲ್ಲಿ 144 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಆತಿಥೇಯ ತಂಡಕ್ಕೆ ಅಶ್ವಿನ್–ಜಡೇಜ ಜೋಡಿಯು ಮರುಜೀವ ತುಂಬಿತು. ಇಬ್ಬರೂ ಸೇರಿ ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 195 ರನ್ ಸೇರಿಸಿದರು. ಇದರಿಂದಾಗಿ ತಂಡವು ದಿನದಾಟದ ಮುಕ್ತಾಯಕ್ಕೆ 80 ಓವರ್‌ಗಳಲ್ಲಿ 6ಕ್ಕೆ339 ರನ್‌ಗಳ ಉತ್ತಮ ಮೊತ್ತ ಪೇರಿಸಿದೆ. ಶತಕ ಗಳಿಸಿದ ಅಶ್ವಿನ್ (ಔಟಾಗದೆ 102; 112 ಎಸೆತ) ಹಾಗೂ ನೂರರತ್ತ ಹೆಜ್ಜೆಹಾಕಿರುವ ಜಡೇಜ (ಅಜೇಯ 87; 117ಎ) ಕ್ರೀಸ್‌ನಲ್ಲಿದ್ದಾರೆ.

ಚಾಣಾಕ್ಷ ಕ್ರಿಕೆಟಿಗ ಅಶ್ವಿನ್ ಎಂಜಿನಿಯರಿಂಗ್ ಪದವೀಧರ ಕೂಡ ಹೌದು. ಅವರಿಗೆ ಇದು ಟೆಸ್ಟ್‌ನಲ್ಲಿ ಆರನೇ ಶತಕ. ವಿಶ್ವದ ಅಪ್ರತಿಮ ಆಫ್‌ಸ್ಪಿನ್ನರ್‌ಗಳಲ್ಲಿ ಒಬ್ಬರು. ತಮ್ಮ ತವರಿನಂಗಳದಲ್ಲಿ ಅವರಿಗೆ ಇದು ಬಹುತೇಕ ಕೊನೆಯ ಟೆಸ್ಟ್ ಪಂದ್ಯವಾಗಿದೆ. ಅಶ್ವಿನ್ ಅವರ ಈ ಶತಕವು ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಅವರು ಕಳೆದ ಮಂಗಳವಾರವಷ್ಟೇ 38ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಚಹಾ ವಿರಾಮಕ್ಕೂ ಸ್ವಲ್ಪ ಹೊತ್ತಿಗೆ ಮುಂಚೆ ಯಶಸ್ವಿ ಜೈಸ್ವಾಲ್ (56 ರನ್) ಅವರು ಔಟಾದರು. ಆಗ ಇನ್ನೊಂದು ಬದಿಯಲ್ಲಿದ್ದ ಜಡೇಜ ಅವರೊಂದಿಗೆ ಸೇರಿಕೊಂಡ ಅಶ್ವಿನ್ ಬಾಂಗ್ಲಾದ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಿದರು. ಶಿಸ್ತುಬದ್ಧ ರಕ್ಷಣಾ ತಂತ್ರ ಅನುಸರಿಸಬೇಕಾದ ಅನಿವಾರ್ಯತೆ ಸಂದರ್ಭ ಅದಾಗಿತ್ತು. ಆದರೆ, ಅಶ್ವಿನ್ ಅವರ ಯೋಜನೆಯೇ ವಿಭಿನ್ನವಾಗಿತ್ತು.

ತಾವು ಎದುರಿಸಿದ ಎರಡನೇ ಎಸೆತದಲ್ಲಿಯೇ ತಮ್ಮ ಇರಾದೆಯನ್ನು ಬಹಿರಂಗಪಡಿಸಿದರು. ನಹೀದ್ ರಾಣಾ ಎಸೆತವನ್ನು ಬೌಂಡರಿಗೆ ಕಳಿಸಿದರು. ಐದು ಎಸೆತಗಳ ನಂತರ ಮತ್ತೊಂದು ಬೌಂಡರಿ ಹೊಡೆದರು. ಇದರಿಂದಾಗಿ ಅವರು ಬೌಲರ್‌ಗಳನ್ನು ದಂಡಿಸುವ ಮೂಡ್‌ನಲ್ಲಿರುವುದು ಸ್ಪಷ್ಟವಾಯಿತು. ನಂತರ ಅಶ್ವಿನ್ ಪ್ರಯೋಗಿಸಿದ ಸುಂದರವಾದ ಡ್ರೈವ್‌ಗಳು ವಿವಿಎಸ್ ಲಕ್ಷಣ್ ಆಟವನ್ನು ನೆನಪಿಸಿದವು. ಅವರ ಟೈಮಿಂಗ್, ಕಟ್ ಶಾಟ್ಸ್, ಸ್ಲಿಪ್ ಮತ್ತು ಸ್ಕ್ವೆರ್‌ಗೆ ಪ್ರಯೋಗಿಸಿದ ಹೊಡೆತಗಳು ನೋಡುಗರ ಮನಕ್ಕೆ ಮುದ ನೀಡಿದವು.

ಬೆಳಗಿನ ಅವಧಿಯಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಗೋಳಾಡಿಸಿದ್ದ ಬೌಲರ್‌ಗಳು ಅಶ್ವಿನ್ ಆಟಕ್ಕೆ ಸುಸ್ತಾದರು. ಈ ಜೊತೆಯಾಟದಲ್ಲಿ ಜಡೇಜ ಅವರ ಪಾತ್ರವೂ ಮಹತ್ವದ್ದಾಗಿತ್ತು. ಅವರು ಅಶ್ವಿನ್ ತರಹ ಆಕ್ರಮಣಶೀಲರಾಗಿರಲಿಲ್ಲ. ಹೆಚ್ಚು ರಕ್ಷಣಾತ್ಮಕ ಹಾಗೂ ತಾಳ್ಮೆಯಿಂದ ಆಡಿದರು. ಆದರೆ ಎಷ್ಟು ಸಾಧ್ಯವೋ ಅಷ್ಟು ಹೊತ್ತು ವಿಕೆಟ್ ಉರುಳದಂತೆ ನೋಡಿಕೊಂಡರು. ರನ್‌ಗಳ ಕಾಣಿಕೆಯನ್ನೂ ನೀಡಿದರು.

ಮೆಹಮೂದ್ ಹಸನ್ ಮಿಂಚು

ಬಾಂಗ್ಲಾದೇಶದ 24 ವರ್ಷದ ಮೆಹಮೂದ್ ಹಸನ್ (58ಕ್ಕೆ4) ಆತಿಥೇಯ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡಕ್ಕೆ ಇನಿಂಗ್ಸ್‌ಮೊದಲ ಒಂದು ಗಂಟೆ ಕಳೆಯುವುದರಲ್ಲಿಯೇ 24 ವರ್ಷದ ಮಧ್ಯಮವೇಗಿ ಹಸನ್ 3 ವಿಕೆಟ್‌ಗಳ ಕಾಣಿಕೆ ನೀಡಿದರು. ಅವರು ಈಚೆಗೆ ಪಾಕಿಸ್ತಾನದ ಎದುರಿನ ಸರಣಿಯಲ್ಲಿ ಎಂಟು ವಿಕೆಟ್ (ಐದರ ಗೊಂಚಲು ಸೇರಿ) ಗಳಿಸಿದ್ದರು.

ಶ್ವೇತಚೆಂಡಿನ ಪರಿಣತ ಬೌಲರ್ ಎನಿಸಿಕೊಂಡು ತಂಡಕ್ಕೆ ಪದಾರ್ಪಣೆ ಮಾಡಿದ್ದ ಹಸನ್ ಈಗ ಕೆಂಪುಚೆಂಡಿನಲ್ಲಿಯೂ ತಮ್ಮ ಭುಜಬಲ ಮೆರೆಯುತ್ತಿದ್ದಾರೆ. ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ತಮ್ಮ ಸ್ವಿಂಗ್ ರುಚಿ ತೋರಿಸಿದ ಹಸನ್ ಕುಣಿದಾಡಿದರು.

ಈ ಹಂತದಲ್ಲಿ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ (39 ರನ್) ಬಲ ತುಂಬುವ ಪ್ರಯತ್ನ ಮಾಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ಈ ಜೊತೆಯಾಟವನ್ನೂ ಹಸನ್ ಅವರೇ ಮುರಿದರು. ರಿಷಭ್ ವಿಕೆಟ್ ಗಳಿಸಿದರು.

ಇನ್ನೊಂದೆಡೆ ನಹೀದ್ ರಾಣಾ ಮತ್ತು ಮೆಹದಿ ಹಸನ್ ಮಿರಾಜ್ ಅವರು ಕ್ರಮವಾಗಿ ಯಶಸ್ವಿ ಮತ್ತು ಕೆ.ಎಲ್. ರಾಹುಲ್ (16 ರನ್) ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.