ಬೆಂಗಳೂರು: ನಗರದಲ್ಲಿ ಭಾನುವಾರ ದಿನವಿಡೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಶನಿವಾರ ರಾತ್ರಿಯೂ ಗಾಳಿಯ ರಭಸ ಜೋರಾಗಿತ್ತು. ಚಳಿ ತೀವ್ರತೆಯಿಂದ ಜನರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಭಾನುವಾರ ರಜೆಯಿದ್ದರಿಂದ ಬಹುತೇಕರು ಮನೆಯಲ್ಲಿ ಕಾಲಕಳೆದರು. ವ್ಯಾಪಾರ ಸಹ ಕ್ಷೀಣಿಸಿತ್ತು. ಬೀದಿಬದಿಯ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ನಗರದ ವಿವಿಧೆಡೆ ನಿರಂತರ ಮಳೆಯಾದರೆ ಕೆಲವು ಪ್ರದೇಶದಲ್ಲಿ ಬಿಟ್ಟುಬಿಟ್ಟು ಮಳೆ ಸುರಿಯಿತು. ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು ಬೈಕ್ ಸವಾರರು ಪರದಾಡಿದರು.

ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಮೆಜಿಸ್ಟಿಕ್, ಗಾಂಧಿ ನಗರದಲ್ಲೂ ಅಗತ್ಯ ವಸ್ತುಗಳ ಖರೀದಿಗೆ ಬಂದವರ ಸಂಖ್ಯೆಯೂ ಕಡಿಮೆಯಾಗಿತ್ತು.

ವಿಜಯನಗರ, ರಾಜರಾಜೇಶ್ವರಿ ನಗರ, ಟಿ.ದಾಸರಹಳ್ಳಿ, ಸುಂಕದಕಟ್ಟೆ, ಯಶವಂತಪುರ, ಹೆಗ್ಗನಹಳ್ಳಿ, ಹೆಬ್ಬಾಳ, ರಾಜಗೋಪಾಲನಗರ, ಶ್ರೀರಾಮಪುರ, ಸುಬ್ರಹ್ಮಣ್ಯ ನಗರ, ಚಂದ್ರಾಲೇಔಟ್‌ನಲ್ಲಿ ನಿರಂತರ ಮಳೆ ಆಯಿತು. ಕಲಾಸಿಪಾಳ್ಯ, ಚಾಮರಾಜಪೇಟೆ, ಉಪ್ಪಾರಪೇಟೆ, ಜೆ.ಜೆ.ನಗರ, ಮಾಗಡಿ ರಸ್ತೆ, ವಿಜಯನಗರದಲ್ಲೂ
ಮಳೆಯಾಯಿತು.

ಚಳಿ ಹಾಗೂ ಮಳೆಯಿಂದ ಉದ್ಯಾನಗಳಲ್ಲಿ ಜನರು ಕಾಣಿಸಿಕೊಳ್ಳಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.