ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಕಾರ ಬ್ಯಾಂಕ್‌ಗಳ ಸಮಾವೇಶ: ಬ್ಯಾಂಕ್‌ಗಳಲ್ಲಿ ದತ್ತಾಂಶ ಸಂರಕ್ಷಣೆಗೆ ಒತ್ತು

Published 23 ಜೂನ್ 2024, 15:12 IST
Last Updated 23 ಜೂನ್ 2024, 15:12 IST
ಅಕ್ಷರ ಗಾತ್ರ

ಬೆಂಗಳೂರು: ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಸೈಬರ್‌ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಗಾಗಿ ಉತ್ತಮ ವಿಧಾನಗಳನ್ನು ಅಳವಡಿಸಲು ಭಾನುವಾರ ನಡೆದ ರಾಷ್ಟ್ರಮಟ್ಟದ ಪಟ್ಟಣ ಸಹಕಾರ ಬ್ಯಾಂಕ್‌ಗಳ ಸಮಾವೇಶದಲ್ಲಿ ನಿರ್ಧರಿಸಲಾಯಿತು. 

ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ನಡೆದ ಈ ಸಮಾವೇಶದಲ್ಲಿ 150 ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಮಾಹಿತಿ ತಂತ್ರಜ್ಞಾನ ತಂಡದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ದೇಶದ ವಿವಿಧ ಐ.ಟಿ. ವಲಯದ ಸಂಸ್ಥೆಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಮಹಾ ಮಂಡಳದ ಹಿರಿಯ ನಿರ್ದೇಶಕ ರುದ್ರೇಗೌಡ ಮಾತನಾಡಿ, ‘ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಸುರಕ್ಷತೆ ಅಗತ್ಯವಾಗಿದೆ. ದತ್ತಾಂಶ ಸೋರಿಕೆ, ಸೈಬರ್ ಅಪಾಯಗಳು ಹೆಚ್ಚಾಗುತ್ತಿವೆ. ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬೇಕು. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವಿಶೇಷ ಗಮನಹರಿಸಬೇಕು. ಮೈಯೆಲ್ಲ ಕಣ್ಣಾಗಿ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಜಿ.ಅನಂತ್ ಕುಮಾರ್ ಮಾತನಾಡಿ, ‘ದತ್ತಾಂಶ ಮತ್ತು ಸೈಬರ್ ಭದ್ರತೆಗೆ ಕೇಂದ್ರ ಸರ್ಕಾರ 2014 ರಲ್ಲಿ ಜಾರಿಗೆ ತಂದ ನಿಯಮಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಮತ್ತಷ್ಟು ಸುಧಾರಿತ ತಂತ್ರಜ್ಞಾನ ಮತ್ತು ನಿಯಮಗಳ ಅಳವಡಿಕೆ ಅಗತ್ಯ. 108 ವರ್ಷಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿರುವ ನಮ್ಮ ಬ್ಯಾಂಕ್‌ನಲ್ಲಿ ಸುಧಾರಣೆಗೆ ಒತ್ತು ನೀಡಲಾಗಿದೆ’ ಎಂದು ವಿವರಿಸಿದರು.

ಸಹಕಾರ ಸಂಘಗಳ ಜಂಟಿ ನಿಬಂಧಕ ಪಿ. ಮಹೇಶ್, ಬ್ಯಾಂಕಿನ ಸಿಇಒ ಜೆ. ಪ್ರಕಾಶ, ಐ.ಟಿ ಮುಖ್ಯಸ್ಥ ಬಿ.ಕೆ. ಗೋಪಿನಾಥ್, ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಸಂವಾದದಲ್ಲಿ ಭಾಗವಹಿಸಿದ್ದರು.

ಮೈಂಡ್ ಮಿಲ್ ಸಾಫ್ಟ್‌ವೇರ್‌ ಲಿಮಿಟೆಡ್ ನಿರ್ದೇಶಕ ರಾಘವ್ ಗುಪ್ತಾ, ಇಎಸ್‌ಡಿಎಸ್ ಸಾಫ್ಟ್‌ವೇರ್‌ನ ಸಿಇಒ ಪೀಯೂಷ್ ಸೋಮಾನಿ, ಯಲಮನ್ಚಲಿ ಡಿಜಿಟಲ್ ಸಲ್ಯೂಷನ್ ಸಿಇಒ ರಾಮಕುಮಾರ್ ಶೇಖರ್, ಪ್ರೋಟೆಕ್ ಮೈಕ್ರೋಸಿಸ್ಟಮ್‌ನ ಐ.ಟಿ. ಸೆಕ್ಯುರಿಟೀಸ್ ನಿರ್ದೇಶಕ ಭಾಸ್ಕರ್ ಪರಶುರಾಮ್ ಚರ್ಚೆ ನಡೆಸಿಕೊಟ್ಟರು.

ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಸಮಾವೇಶ 150 ಸಹಕಾರಿ ಬ್ಯಾಂಕುಗಳ ಪ್ರತಿನಿಧಿಗಳು ಭಾಗಿ ಸೈಬರ್ ವಂಚನೆ ಬಗ್ಗೆ ಚರ್ಚೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT