ಬೆಂಗಳೂರು: 38 ದಿನಗಳ ಮಗುವನ್ನು ಕದ್ದು ಮಾರಿದ್ದ ಆರೋಪದಡಿ ಮೂವರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ತರುಣಮ್ ಬಾನು (38), ನಿಶಾತ್ ಕೌಶರ್ (35) ಹಾಗೂ ಕೆ.ಸವೋದ್ (51) ಬಂಧಿತರು.

‘ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯ ಅಗಡಿ ಆಸ್ಪತ್ರೆಯ ಬಳಿ ಹಣಕ್ಕಾಗಿ ಇಬ್ಬರು ಜಗಳವಾಡುತ್ತಿದ್ದ ಮಾಹಿತಿ ಪೊಲೀಸರಿಗೆ ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿದಾಗ ಪೊಲೀಸರನ್ನು ಕಂಡು ವ್ಯಕ್ತಿಯೊಬ್ಬ ಪರಾರಿಯಾದ. ಅಲ್ಲೇ ಇದ್ದತರುಣಮ್ ಬಾನುಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಮಗು ಕದ್ದು ಮಾರಾಟ ಮಾಡಿರುವ ವಿಚಾರ ಹೇಳಿದಳು’ ಎಂದು ಪೊಲೀಸರು ತಿಳಿಸಿದರು.

‘ಪರಾರಿಯಾದ ಮುಬಾರಕ್ ಎನ್ನುವ ವ್ಯಕ್ತಿಗೆ ಮತ್ತು ಮಹಿಳೆಯೊಬ್ಬರಿಗೆ ಅಕ್ರಮ ಸಂಬಂಧವಿತ್ತು. ಅವರಿಗೆ ಈ ಮಗು ಜನಿಸಿತ್ತು. 15 ವರ್ಷಗಳಿಂದ ಮಕ್ಕಳಿಲ್ಲದ ಸಮಸ್ಯೆ ಎದುರಿಸುತ್ತಿದ್ದಸವೋದ್ಗೆ ಮಗುವನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದರು. ಇದಕ್ಕಾಗಿತರುಣಮ್, ಮುಬಾರಕ್ ಹಾಗೂನಿಶಾತ್ ಸೇರಿ ತಾಯಿಗೆ ತಿಳಿಯದಂತೆ ಮಗುವನ್ನು ಕದ್ದಿದ್ದರು. ಸವೋದ್ಗೆ ₹1.30 ಲಕ್ಷಕ್ಕೆ ಮಗುವನ್ನು ಮಾರಿ, ಮುಂಗಡವಾಗಿ ₹50 ಸಾವಿರ ಹಣ ಪಡೆದಿದ್ದರು’ ಎಂದು ವಿವರಿಸಿದರು.

‘ಆರೋಪಿತರುಣಮ್ ನೀಡಿದ ಮಾಹಿತಿ ಮೇರೆಗೆಸವೋದ್ನನ್ನು ಬಂಧಿಸಲಾಯಿತು. ಮಗುವನ್ನು ರಕ್ಷಿಸಿ ತಾಯಿಗೆ ಹಸ್ತಾಂತರಿಸಲಾಗಿದೆ. ಮುಂಗಡವಾಗಿ ನೀಡಿದ ₹50 ಸಾವಿರ ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವಮುಬಾರಕ್ನ ಪತ್ತೆ ಕಾರ್ಯ ಮುಂದುವರಿದಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.