ಬೆಂಗಳೂರು: ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ಸಿದ್ದಿಕ್ (25) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಅಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಸಿದ್ದಿಕ್, ಆಟೊ ಚಾಲಕ. ಭಾನುವಾರ ರಾತ್ರಿ ಇವರನ್ನು ಕೊಲೆ ಮಾಡಲಾಗಿದೆ. ಸ್ನೇಹಿತನೇ ಆಗಿದ್ದ ಆಟೊ ಚಾಲಕ ಅಜಯ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಿದ್ದಿಕ್ ಹಾಗೂ ಅಜಯ್ ಪರಿಚಿತರು. ಸಣ್ಣ–ಪುಟ್ಟ ಕಾರಣಕ್ಕೂ ಆಗಾಗ ಜಗಳ ಮಾಡುತ್ತಿದ್ದರು. ಭಾನುವಾರ ರಾತ್ರಿ ಇಬ್ಬರೂ ಭೇಟಿಯಾಗಿದ್ದರು. ಇದೇ ವೇಳೆಯೇ ಸಿದ್ದಿಕ್, ‘ಮಗಾ ಸ್ವಲ್ಪ ಕುಡಿಯಲು ನೀರು ಕೊಡು’ ಎಂದಿದ್ದರು. ಅಷ್ಟಕ್ಕೆ ಕೋಪಗೊಂಡ ಅಜಯ್, ‘ನನಗೆ ಮಗಾ ಎನ್ನುತ್ತಿಯಾ’ ಎಂದು ಜಗಳ ತೆಗೆದಿದ್ದ. ನಂತರ, ಚಾಕುವಿನಿಂದ ಹಲವು ಬಾರಿ ಇರಿದಿದ್ದ.’

‘ತೀವ್ರ ಗಾಯಗೊಂಡು ಕುಸಿದು ಬಿದ್ದಿದ್ದ ಸಿದ್ದಿಕ್ ಅವರನ್ನು ಸ್ಥಳಿಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.