ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಜಾ ಸಾಗಣೆ, ಮಾರಾಟ ಆರೋಪಿಯ ₹50 ಲಕ್ಷದ ಆಸ್ತಿ ಜಪ್ತಿ

Published : 9 ಜುಲೈ 2022, 19:43 IST
ಫಾಲೋ ಮಾಡಿ
Comments

ಬೆಂಗಳೂರು: ಗಾಂಜಾ ಮಾರಾಟದ ಆರೋಪಿ, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪುಷ್ಪಾಪುರ ಗ್ರಾಮದ ಜಿ. ಮಲ್ಲೇಶ್‌ ಎಂಬಾತ ಅಕ್ರಮವಾಗಿ ಗಳಿಸಿದ್ದ ₹50 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಸಿ.ಸಿ.ಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಆರೋಪಿಯಿಂದ ಅಕ್ರಮ ಆಸ್ತಿ ವಶಕ್ಕೆ ಪಡೆದ ಪ್ರಥಮ ಪ್ರಕರಣ ಇದಾಗಿದೆ.

ಆರೋಪಿಯು 12 ವರ್ಷಗಳಿಂದ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ. ಈತನ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿ ಬೆಂಗಳೂರು ನಗರ, ಮೈಸೂರು, ಚಾಮರಾಜನಗರ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ 2014ರಿಂದ 2022ರ ತನಕ ಒಟ್ಟು 7 ಪ್ರಕರಣಗಳು ದಾಖಲಾಗಿದ್ದವು. ಈತ ಗಾಂಜಾ ಮಾರಾಟವನ್ನೇ ದಂಧೆಯಾಗಿ ಮಾಡಿಕೊಂಡಿದ್ದ. ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ರಾಜ್ಯಗಳಿಂದ ಗಾಂಜಾವನ್ನು ಖರೀದಿಸಿ ಅದನ್ನು ರಾಜ್ಯದ ವಿವಿಧೆಡೆ ಪೂರೈಸುತ್ತಿದ್ದ. ಅದರಿಂದ ಬಂದ ಹಣದಲ್ಲಿ ಪತ್ನಿ ಹಾಗೂ ಪುತ್ರನ ಹೆಸರಿನಲ್ಲಿ 2013ರಲ್ಲಿ ಚಾಮರಾಜನಗರ ಜಿಲ್ಲೆಯ ಶಾಗ್ಯ ಗ್ರಾಮದಲ್ಲಿ ₹50 ಲಕ್ಷ ಮೌಲ್ಯದ 8 ಎಕರೆ ಜಮೀನು
ಖರೀದಿಸಿದ್ದ.

ಈತನ ಹೆಸರಿನ ಐದು ಬ್ಯಾಂಕ್‌ ಖಾತೆಗಳಲ್ಲಿದ್ದ
₹3 ಲಕ್ಷ ಹಣವನ್ನು ತನಿಖಾಧಿ
ಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆಎಂದು
ಸಿ.ಸಿ.ಬಿ ಮೂಲಗಳು ತಿಳಿಸಿವೆ.

ಆರೋಪಿಯ ಪುತ್ರ, ಪತ್ನಿಯ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಅನಧಿಕೃತವಾಗಿ ಜಮೆ ಮಾಡಿದ್ದ. ವಿವಿಧ ಎಲೆಕ್ಟ್ರಾನಿಕ್‌ ವರ್ಗಾವಣೆಗಳಿಂದ ಲಕ್ಷಾಂತರ ರೂಪಾಯಿ ಹಣವು ಆರೋಪಿ ಖಾತೆಗೆ ಜಮೆ ಆಗಿರುವುದು ಪತ್ತೆಯಾಗಿದೆ. ಆದಾಯ ತೆರಿಗೆ ಪಾವತಿಸದೆ ವಹಿವಾಟು ಮರೆಮಾಚಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT