ಬೆಂಗಳೂರು: ನಗರದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್ಇಸಿ) ತನ್ನ ಮೊದಲ ಡಿಜಿಟಲ್ ಜನಸಂಖ್ಯಾ ಗಡಿಯಾರವನ್ನು ಅನಾವರಣಗೊಳಿಸಿದೆ. ಕರ್ನಾಟಕ ಮತ್ತು ಭಾರತಕ್ಕೆ ನೈಜ-ಸಮಯದ ಜನಸಂಖ್ಯೆಯ ಅಂದಾಜುಗಳನ್ನು ಒದಗಿಸಲಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ಗಡಿಯಾರವನ್ನು ಐಎಸ್ಇಸಿ ಮುಖ್ಯ ದ್ವಾರದ ಬಳಿ ಸ್ಥಾಪಿಸಲಾಗಿದೆ. ಉಪಗ್ರಹ ಸಂಪರ್ಕ ಬಳಸಿ ನಿಖರ ಸಮಯಪಾಲನೆಯ ಜೊತೆಗೆ ಜನಸಂಖ್ಯಾ ದತ್ತಾಂಶವನ್ನು ಸಂಗ್ರಹಿಸುತ್ತದೆ. ಜನಸಂಖ್ಯೆಯನ್ನು ಪ್ರತಿ ಎರಡು ಸೆಕೆಂಡುಗಳಿಗೆ ಮತ್ತು ಕರ್ನಾಟಕದ ಜನಸಂಖ್ಯೆಯನ್ನು ಪ್ರತಿ ಒಂದು ನಿಮಿಷ ಹತ್ತು ಸೆಕೆಂಡುಗಳಿಗೆ ನವೀಕರಿಸಿ ಗಡಿಯಾರ ಪ್ರದರ್ಶಿಸಲಿದೆ.

ಸಂಶೋಧಕರಿಗೆ ವಿಶ್ಲೇಷಣೆ ನಡೆಸಲು, ತಜ್ಞರಿಗೆ ಜನಸಂಖ್ಯೆಯ ಆಧಾರದಲ್ಲಿ ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ರೂಪಿಸಲು ಈ ಗಡಿಯಾರ ನೀಡುವ ಮಾಹಿತಿ ಉಪಯೋಗವಾಗಲಿದೆ ಎಂದು ಜನಸಂಖ್ಯಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸಿ.ಎಂ.ಲಕ್ಷ್ಮಣ ಮಾಹಿತಿ ನೀಡಿದರು.

ಸಂಖ್ಯಾಶಾಸ್ತ್ರ ವಿಭಾಗದ ಮಹಾನಿರ್ದೇಶಕ ಕಲ್ ಸಿಂಗ್ ಗಡಿಯಾರವನ್ನು ಅನಾವರಣಗೊಳಿಸಿದರು. ಆರೋಗ್ಯ ಸಚಿವಾಲಯದ ಉಪ ಮಹಾನಿರ್ದೇಶಕ ರಾಕೇಶ್ ಕುಮಾರ್ ಮೌರ್ಯ, ಐಎಸ್ಇಸಿ ಆಡಳಿತ ಮಂಡಳಿಯ ಅಧ್ಯಕ್ಷ ಸುಖದೇವ್ ಥೋರಟ್ ಭಾಗವಹಿಸಿದ್ದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶದಾದ್ಯಂತ 18 ಜನಸಂಖ್ಯಾ ಸಂಶೋಧನಾ ಕೇಂದ್ರಗಳಲ್ಲಿ ಡಿಜಿಟಲ್ ಜನಸಂಖ್ಯೆ ಗಡಿಯಾರಗಳನ್ನು ಸ್ಥಾಪಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.