ಬೆಂಗಳೂರು: ಖಾಕಿ ಸಮವಸ್ತ್ರ ಧರಿಸಿ, ಆಟೊ ಓಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ನಿಮ್ಮ ಕಷ್ಟ–ಸುಖದ ಜೊತೆ ನಾನೂ ಇದ್ದೇನೆ’ ಎಂದು ಆಟೊ ಚಾಲಕರಲ್ಲಿ ವಿಶ್ವಾಸ ತುಂಬಲು ಯತ್ನಿಸಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ಆಟೊ ಚಾಲಕರ ಜತೆ ಗುರುವಾರ ಅವರು ಸಂವಾದ ನಡೆಸುವುದಕ್ಕೂ ಮೊದಲು, ಅರಮನೆ ಮೈದಾನದ ಪ್ರವೇಶದ್ವಾರದಿಂದ ಸಂವಾದ ಸ್ಥಳದವರೆಗೂ ಆಟೋ ಚಾಲನೆ ಮಾಡಿದರು.

‘ಇಂದು ನನ್ನ ಜೀವನದಲ್ಲಿ ಬಹಳ ನೆನಪಿನಲ್ಲಿ ಉಳಿಯಲಿರುವ ದಿನ. ಕಾರಣ, ನಾನು ಪವಿತ್ರ ಆಟೊ ಚಾಲನೆ ಮಾಡಿದ ದಿನ. ನಿಮ್ಮ ಕುಟುಂಬದ ಸದಸ್ಯನಾಗಿ ನಾನು ಇಲ್ಲಿ ನಿಂತಿದ್ದೇನೆ. ಸ್ವಾಭಿಮಾನದ ಬದುಕು ನಡೆಸುತ್ತಿರುವ ನೀವು,ಮಧ್ಯಮವರ್ಗ ಹಾಗೂ ಜನ ಸಾಮಾನ್ಯರ ಸಾರಥಿಗಳು’ ಎಂದು ಆಟೊ ಚಾಲಕರನ್ನು ಬಣ್ಣಿಸಿದರು.

‘ಪಕ್ಷದ ನಾಯಕರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರು ಪಕ್ಷದಲ್ಲಿ ಚಾಲಕರ ವಿಭಾಗ ಆರಂಭಿಸಬೇಕು ಎಂದು ಸಲಹೆ ನೀಡಿದ್ದರು. ಅವರ ಸಲಹೆಯಂತೆ ಘಟಕ ಆರಂಭಿಸಿದ್ದೇವೆ. ಆ ಮೂಲಕ ನಿಮ್ಮ ಮನೆ ಸದಸ್ಯರಾಗಿದ್ದೇವೆ. ಮುಂದೆ ಕಾಂಗ್ರೆಸ್ ಸರ್ಕಾರ ಬರಲಿದೆ. ಪೊಲೀಸರು ನಿಮಗೆ ನೀಡುತ್ತಿರುವ ಕಿರುಕುಳ ತಪ್ಪಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ನಿಮ್ಮ ಹೋರಾಟದ ದಿಕ್ಕು ಮೇ ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರುವತ್ತ ಇರಬೇಕು’ ಎಂದು ಮನವಿ ಮಾಡಿದರು.

ಶಾಸಕ ರಿಜ್ವಾನ್ ಅರ್ಷದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.