ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ನೊಂದು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಸಾಹಳ್ಳಿ ಗ್ರಾಮದ ಭಾರತಿ(22) ಆತ್ಮಹತ್ಯೆ ಮಾಡಿಕೊಂಡವರು.

ಪತಿ ಲೋಕೇಶ್ ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದ ಸಂಬಂಧ ಯಶೋಧಮ್ಮ, ಶಿವಣ್ಣ, ದೀಪಕ್, ಮೇಘನಾ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

ಮಳವಳ್ಳಿ ತಾಲ್ಲೂಕಿನ ಎನ್ಇಎಸ್ ಬಡಾವಣೆ ನಿವಾಸಿ ಲೋಕೇಶ್ ಅವರ ಜತೆಗೆ ಭಾರತಿ ಅವರ ಮದುವೆ ಕಳೆದ ವರ್ಷ ನಡೆದಿತ್ತು. ಮದುವೆ ಸಂದರ್ಭದಲ್ಲಿ 200 ಗ್ರಾಂ. ಚಿನ್ನಾಭರಣ, ₹1 ಲಕ್ಷ ನಗದು ನೀಡಲಾಗಿತ್ತು. ಆರಂಭದಲ್ಲಿ ದಂಪತಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಕ್ರಮೇಣ ಗಲಾಟೆ ಆರಂಭವಾಯಿತು. ಪ್ರತ್ಯೇಕ ಮನೆ ಮಾಡಲು ಮುಂಗಡವಾಗಿ ಹಣ ಸಹ ನೀಡಲಾಗಿತ್ತು. ಬೆಂಗಳೂರಿನ ಮಾರುತಿ ನಗರದಲ್ಲಿ ದಂಪತಿ ವಾಸವಿದ್ದರು. ಅದಾದ ಮೇಲೂ ಕಿರುಕುಳ ನೀಡುತ್ತಿದ್ದರು. ಹೆಚ್ಚಿನ ವರದಕ್ಷಿಣಿಗಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರಿಂದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಅವರ ತಂದೆ ಸುಬ್ಬೇಗೌಡ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.