ಬೆಂಗಳೂರು: ಮೊಬೈಲ್ ಕೊಡಿಸುವಂತೆ ಬಲವಂತ ಮಾಡಿದ್ದ ಪುತ್ರನಿಗೆ ಕ್ರಿಕೆಟ್ ಬ್ಯಾಟ್ನಿಂದ ಥಳಿಸಿ, ಕೊಲೆ ಮಾಡಿರುವ ಆರೋಪದ ಅಡಿ ಕುಮಾರಸ್ವಾಮಿ ಠಾಣೆ ಪೊಲೀಸರು ತಂದೆಯನ್ನು ಶನಿವಾರ ಬಂಧಿಸಿದ್ದಾರೆ.

9ನೇ ತರಗತಿಯ ವಿದ್ಯಾರ್ಥಿ ತೇಜಸ್(14) ಕೊಲೆಯಾಗಿದ್ದು, ಆತನ ತಂದೆ ರವಿಕುಮಾರ್(44) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ಕೃತ್ಯ ನಡೆದಿದೆ.

‘ರವಿಕುಮಾರ್ ಅವರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಶಶಿಕಲಾ ಕೂಲಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ವಿಶಾಲ್ ಹಾಗೂ ತೇಜಸ್ ಇಬ್ಬರು ಮಕ್ಕಳು. ತೇಜಸ್ ಸರಿಯಾಗಿ ಶಾಲೆಗೆ ಹೋಗದೇ ಸ್ನೇಹಿತರ ಜತೆಗೆ ಹೆಚ್ಚು ಸುತ್ತಾಡುತ್ತಿದ್ದ. ತೇಜಸ್ಗೆ ಚಿಕ್ಕ ವಯಸ್ಸಿನಲ್ಲೇ ಕೆಲವು ದುಶ್ಚಟಗಳಿದ್ದವು. ಪ್ರತಿನಿತ್ಯ ಪೋಷಕರ ಬಳಿ ಒಂದೊಂದು ಬೇಡಿಕೆ ಇಡುತ್ತಿದ್ದ. ಇದು ದಂಪತಿಗೆ ಸಿಟ್ಟು ಹಾಗೂ ಬೇಸರ ತರಿಸಿತ್ತು. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಸಹ ನಡೆಯುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.

‘ಮದ್ಯವ್ಯಸನಿ ಆಗಿದ್ದ ರವಿಕುಮಾರ್ ಅವರು ಕೆಲವು ದಿನಗಳಿಂದ ಕಾರ್ಪೆಂಟರ್ ಕೆಲಸಕ್ಕೆ ಹೋಗುತ್ತಿರಲಿಲ್ಲ. ಶಶಿಕಲಾ ಅವರೇ ಕೆಲಸ ಮಾಡಿ ಅದರಿಂದ ಬಂದ ಸಂಪಾದನೆಯಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಶುಕ್ರವಾರ ಬೆಳಿಗ್ಗೆ ಮೊಬೈಲ್ ಕೊಡಿಸುವ ವಿಚಾರಕ್ಕೆ ತಂದೆ ಹಾಗೂ ಪುತ್ರನ ಮಧ್ಯೆ ಜಗಳವಾಗಿತ್ತು’ ಎಂದು ಮೂಲಗಳು ಹೇಳಿವೆ.

‘ನನ್ನ ಎಲ್ಲ ಸ್ನೇಹಿತರ ಬಳಿ ಮೊಬೈಲ್ ಇದೆ. ನೀನೂ ನನಗೆ ಹೊಸ ಫೋನ್ ಕೊಡಿಸು ಎಂದು ತಂದೆಯನ್ನು ಕೇಳಿದ್ದ. ಹೊಸ ಫೋನ್ ಕೊಡಿಸಲು ಆಗದಿದ್ದರೆ, ಮನೆಯಲ್ಲಿರುವ ಹಳೆಯ ಫೋನ್ ರಿಪೇರಿ ಮಾಡಿಸಿಕೊಡುವಂತೆ ಕೇಳಿದ್ದ. ಜೀವನ ನಿರ್ವಹಣೆಯೇ ಕಷ್ಟವಾಗಿದ್ದು, ಮೊಬೈಲ್ ಕೊಡಿಸಲು ಸಾಧ್ಯವಿಲ್ಲ ಎಂದು ತಾಯಿ ಬುದ್ಧಿಮಾತು ಹೇಳಿದ್ದರು. ಆಗ ತಂದೆ–ಪುತ್ರ ಮಧ್ಯೆ ಮತ್ತೆ ಗಲಾಟೆ ನಡೆದಿತ್ತು. ಮನೆಯಲ್ಲಿದ್ದ ಕ್ರಿಕೆಟ್ ಬ್ಯಾಟ್ನಿಂದ ಆರೋಪಿ, ಪುತ್ರನನ್ನು ಥಳಿಸಿ ಗೋಡೆಗೆ ದೂಡಿದ್ದ. ಇದರಿಂದ ತಲೆಗೆ ಪೆಟ್ಟಾಗಿತ್ತು’ ಎಂದು ಪೊಲೀಸರು ಹೇಳಿದರು.

‘ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣಕ್ಕೆ ತೇಜಸ್ ಅಂದು ಶಾಲೆಗೆ ತೆರಳಿರಲಿಲ್ಲ. ಮಧ್ಯಾಹ್ನದ ವೇಳೆಗೆ ನೋವು ತೀವ್ರವಾಗಿತ್ತು. ಆಗ ಎಚ್ಚೆತ್ತ ದಂಪತಿ, ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಪರಿಶೀಲಿಸಿದ್ದ ವೈದ್ಯರು, ಮಗು ಮೃತಪಟ್ಟು ಒಂದು ತಾಸು ಕಳೆದಿದೆ ಎಂಬುದಾಗಿ ಹೇಳಿದ್ದರು. ಇದರಿಂದ ಗಾಬರಿಗೊಂಡ ದಂಪತಿ ಮೃತದೇಹವನ್ನು ಮನೆಗೆ ತಂದು ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಅದೇ ವೇಳೆಗೆ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಕೃತ್ಯದ ಬಗ್ಗೆ ಸುಳಿವು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ತಾಯಿಯ ವಿಚಾರಣೆ ನಡೆಸಿದಾಗ ಹಲ್ಲೆಯಿಂದ ನಡೆದಿರುವ ಕೊಲೆಯ ವಿಚಾರ ಬಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಲೆಯಲ್ಲಿ ರಕ್ತಸ್ರಾವ ಹಾಗೂ ಬಲವಾದ ಪೆಟ್ಟಿನಿಂದ ಸಾವು ಸಂಭವಿಸಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪ್ರಾಥಮಿಕ ವರದಿ ನೀಡಿದ್ದು ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.