ಬೆಂಗಳೂರು: ತುಮಕೂರು ರಸ್ತೆಯಲ್ಲಿರುವ ಪೀಣ್ಯ ಮೇಲ್ಸೇತುವೆಯನ್ನು ಮತ್ತಷ್ಟು ಸುಭದ್ರಗೊಳಿಸುವ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು, 1,400 ಕೇಬಲ್ಗಳ ಪೈಕಿ 700 ಕೇಬಲ್ಗಳನ್ನು ಯಶಸ್ವಿಯಾಗಿ ಬದಲಾವಣೆ ಮಾಡಲಾಗಿದೆ. ಸದ್ಯ ದಾಸರಹಳ್ಳಿಯ ಮೆಟ್ರೊ ನಿಲ್ದಾಣದ ಬಳಿ ಕಾಮಗಾರಿ ಪ್ರಗತಿಯಲ್ಲಿದೆ.

ಮೇಲ್ಸೇತುವೆಯ 8ನೇ ಮೈಲಿನ ಜಂಕ್ಷನ್ ಸಮೀಪದ 102 ಹಾಗೂ 103ನೇ ಪಿಲ್ಲರ್ನಲ್ಲಿ ಕೇಬಲ್ಗಳು ಬಾಗಿದ್ದರಿಂದ 2021ರ ಡಿಸೆಂಬರ್ನಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಅದಾದ ಮೇಲೆ ತಜ್ಞರು ಪರಿಶೀಲಿಸಿ, ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಸರಕು ಸಾಗಣೆ ಹಾಗೂ ಬಸ್ಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರು.

‘ಆ ಬಳಿಕ 120 ಪಿಲ್ಲರ್ಗಳಲ್ಲಿ 240 ಕೇಬಲ್ ಬದಲಾವಣೆ ಮಾಡಿ ಕಳೆದ ಜುಲೈ 29ರಿಂದ ಎಲ್ಲ ಮಾದರಿಯ ವಾಹನ ಸಂಚಾರಕ್ಕೆ ಮೇಲ್ಸೇತುವೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದೀಗ ತುಕ್ಕು ಹಿಡಿದಿರುವ 1,400 ಕೇಬಲ್ಗಳನ್ನೂ ಬದಲಾವಣೆ ಮಾಡುವ ಕಾಮಗಾರಿ ನಡೆಯುತ್ತಿದ್ದು, 2025ರ ಮಾರ್ಚ್ ಅಂತ್ಯಕ್ಕೆ ದುರಸ್ತಿ ಕೆಲಸ ಪೂರ್ಣಗೊಳ್ಳಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಬೆಂಗಳೂರು ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕು ತಂಡಗಳಿಂದ ಕೆಲಸ: ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ನಾಲ್ಕು ಪ್ರತ್ಯೇಕ ತಂಡಗಳು ಕೆಲಸ ಮಾಡುತ್ತಿವೆ ಎಂದೂ ಮಾಹಿತಿ ನೀಡಿದರು.

ಪೀಣ್ಯ–ಕೆನ್ನಮೆಟಲ್ (ವಿಡಿಯಾ) ನಡುವೆ ಈ ಮೇಲ್ಸೇತುವೆ ಹಾದುಹೋಗಿದ್ದು, ಒಟ್ಟು 120 ಪಿಲ್ಲರ್ಗಳಿವೆ. ಏಷ್ಯಾದಲ್ಲೇ ಅತಿದೊಡ್ಡದಾದ ಪೀಣ್ಯ ಕೈಗಾರಿಕಾ ಪ್ರದೇಶ ಮೇಲ್ಸೇತುವೆ ಪಕ್ಕದಲ್ಲೇ ಇದೆ. ಕೈಗಾರಿಕಾ ಪ್ರದೇಶಕ್ಕೆ ಹೊರ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ಟ್ರಕ್ಗಳು ಬರುತ್ತವೆ. ರಾಜ್ಯದ 21 ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಗೂ ಇದೇ ಮಾರ್ಗ ಸಂಪರ್ಕ ಕೊಂಡಿ. ಹೀಗಾಗಿ ಮೇಲ್ಸೇತುವೆಯನ್ನು ಭದ್ರಪಡಿಸುವ ಕೆಲಸ ಭರದಿಂದ ಸಾಗುತ್ತಿದೆ.

‘ಹಿಂದೆ ಅಳವಡಿಸಿದ್ದ ಕೇಬಲ್ಗಳಿಗಿಂತಲೂ ದೀರ್ಘಕಾಲ ಬಾಳಿಕೆ ಬರುವ ಹಾಗೂ ಗುಣಮಟ್ಟದ ಕೇಬಲ್ಗಳನ್ನು ಅಳವಡಿಸಲಾಗುತ್ತಿದೆ. ಈಗ ಅಳವಡಿಸುತ್ತಿರುವ ಕೇಬಲ್ಗಳಿಗೆ ಮೂರು ಪದರಗಳಿವೆ. ಈ ರೀತಿಯ ಕೇಬಲ್ಗಳನ್ನೂ ದೇಶದ ಬೇರೆ ಯಾವುದೇ ಮೇಲ್ಸೇತುವೆಯಲ್ಲೂ ಅಳವಡಿಸಿಲ್ಲ’ ಎಂದು ಎಂಜಿನಿಯರ್ ಒಬ್ಬರು ತಿಳಿಸಿದರು.

ಬೆಳಕಿನ ವ್ಯವಸ್ಥೆ: ಮೇಲ್ಸೇತುವೆಯ ಸಿಮೆಂಟ್ ಬ್ಲಾಕ್ಗಳ ಮಧ್ಯೆ ಖಾಲಿ ಜಾಗವಿದೆ. ಹಿಂದೆ ಬೆಳಕಿನ ವ್ಯವಸ್ಥೆ ಇರಲಿಲ್ಲ. ಕಾರ್ಮಿಕರು ಟಾರ್ಚ್ ಹಿಡಿದು ದುರಸ್ತಿ ಕೆಲಸ ಮಾಡಬೇಕಿತ್ತು. ಈಗ ವಿದ್ಯುತ್ ಸಂಪರ್ಕದ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಬೇಗ ಕಾಮಗಾರಿ ಪೂರ್ಣಗೊಳಿಸಲು ಅನುಕೂಲ ಆಗಲಿದೆ ಎಂದು ಎಂಜಿನಿಯರ್ಗಳು ಹೇಳುತ್ತಾರೆ.

ಹೊಸದಾಗಿ ಅಳವಡಿಕೆ ಮಾಡಿರುವ ಕೇಬಲ್ಗಳಿಗೆ ಸಿಮೆಂಟ್ ತುಂಬುವ ಕೆಲಸ ಪ್ರತಿ ಶುಕ್ರವಾರ ನಡೆಯಲಿದೆ. ಪ್ರತಿ ಶುಕ್ರವಾರ ಬೆಳಿಗ್ಗೆ 6ರಿಂದ ಶನಿವಾರ ಬೆಳಿಗ್ಗೆ 6ರ ತನಕ ಮೇಲ್ಸೇತುವೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ಈಗಲೂ ಮುಂದುವರೆಯಲಿದೆ. ಕಾಮಗಾರಿಯನ್ನು ಇನ್ನಷ್ಟು ತ್ವರಿತಗೊಳಿಸಲು ಉದ್ದೇಶಿಸಲಾಗಿದೆ ಎಂದೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಹೊರಭಾಗದಿಂದ ಪೈಪ್ ಅಳವಡಿಕೆ

ಮಳೆಯ ಸಂದರ್ಭದಲ್ಲಿ ಜಾಲಹಳ್ಳಿ ಎಂಟನೇ ಮೈಲು ಹಾಗೂ ನಾಗಸಂದ್ರದಲ್ಲಿ ಮೇಲ್ಸೇತುವೆಯಿಂದ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿತ್ತು. ಕೆಳ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ಈ ತೊಂದರೆ ನಿವಾರಿಸಲು ಒಳ ಭಾಗದಲ್ಲಿದ್ದ ಪೈಪ್ಗಳನ್ನು ತೆರವುಗೊಳಿಸಿ ಹೊರಭಾಗದಿಂದ ಅಳವಡಿಸಲಾಗುತ್ತಿದೆ. ಮೇಲೆ ಬಿದ್ದ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎನ್ಎಚ್ಎಐ ಯೋಜನಾ ನಿರ್ದೇಶಕ ಕೆ.ಬಿ. ಜಯಕುಮಾರ್ ತಿಳಿಸಿದರು.

ತುಸು ತಗ್ಗಿದ ದಟ್ಟಣೆ

ಸದ್ಯ ಎಲ್ಲ ಮಾದರಿಯ ವಾಹನಗಳು ಮೇಲ್ಸೇತುವೆಯಲ್ಲಿ ಸಂಚರಿಸುತ್ತಿವೆ. ನಾಗಸಂದ್ರ ಎಂಟನೇ ಮೈಲಿ ದಾಸರಹಳ್ಳಿ ಜಾಲಹಳ್ಳಿ ಪೀಣ್ಯ ಜಂಕ್ಷನ್ಗಳಲ್ಲಿ ವಾಹನ ದಟ್ಟಣೆ ತುಸು ತಗ್ಗಿದೆ. ಆದರೆ ಟೋಲ್ ಬಳಿ ಸರಕು ಸಾಗಣೆ ವಾಹನಗಳನ್ನು ರಸ್ತೆ ಬದಿಯಲ್ಲೇ ಹಗಲು ವೇಳೆ ನಿಲುಗಡೆ ಮಾಡುತ್ತಿರುವ ಪರಿಣಾಮ ಸುತ್ತಮುತ್ತ ಸಮಸ್ಯೆ ಆಗುತ್ತಿದೆ ಎಂದು ಚಾಲಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.