ಶ್ರೀನಿವಾಸಪುರ: ‘ಶ್ರೀನಿವಾಸಪುರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ, ನಿಯತ್ತು ಹಾಗೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆದರೆ, ನನಗೆ ಮೋಸವಾಯಿತು. ನನ್ನ ಜೀವನದಲ್ಲಿ ಮುಂದೆಂದೂ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಬಳಿ ಬಂದು ಮತ ಕೇಳಲ್ಲ’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಭಾವುಕರಾಗಿ ನುಡಿದರು.

ತಾಲ್ಲೂಕಿನ ಅಡ್ಡಗಲ್‌ನ ಸ್ವಗೃಹದಲ್ಲಿ ಭಾನುವಾರ ನಡೆದ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಶ್ರೀನಿವಾಸಪುರ ಕ್ಷೇತ್ರಕ್ಕಾಗಿ ನನ್ನ ಜೀವನವನ್ನೇ ಅರ್ಪಿಸಿದ್ದೇನೆ. ಯಾರ ಮುಂದೆಯೂ ಕೈ ಚಾಚಿಲ್ಲ. ಆದರೆ, ಕೆಲವರು ನನ್ನ ಬೆನ್ನಿಗೆ ಚೂರಿ ಹಾಕಿದರು. ಪುತ್ರನಿಗೆ ಬದುಕುವ ದಾರಿ ತೋರಿಸಿದ್ದೇನೆ, ಆತನಿಗೆ ರಾಜಕೀಯ ಅವಶ್ಯವಿಲ್ಲ’ ಎಂದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ರಮೇಶ್ ಕುಮಾರ್ ಲಭ್ಯರಾಗಲಿಲ್ಲ. ಆದರೆ, ಅವರ ಆಪ್ತರು ಹಾಗೂ ಕುಟುಂಬದವರು ಪ್ರತಿಕ್ರಿಯಿಸಿ, ‘ಮತ ಕೇಳಲು ಬರಲ್ಲ ಎಂದಷ್ಟೇ ರಮೇಶ್ ಕುಮಾರ್ ಭಾವುಕರಾಗಿ ನುಡಿದರು. ಎಲ್ಲೂ ರಾಜಕೀಯ ನಿವೃತ್ತಿ ಬಗ್ಗೆ ಪ್ರಸ್ತಾಪಿಸಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.