ಬೆಂಗಳೂರು: ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಸಂಬಂಧ ಇಲ್ಲಿನ ರೆಫರಲ್ ಲ್ಯಾಬ್ಸ್, ಸಮುದಾಯದ ನೆರವಿನಿಂದ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ಈವರೆಗೆ 800ಕ್ಕೂ ಅಧಿಕ ಶಿಬಿರಗಳನ್ನು ನಡೆಸಿದೆ.

ಇಲ್ಲಿನ ಸಹಕಾರನಗರದಲ್ಲಿರುವ ಈ ಪ್ರಯೋಗಾಲಯ, ಎನ್‌ಎಬಿಎಲ್ (ನ್ಯಾಷನಲ್ ಅಕ್ರಿಡಿಯೇಶನ್ ಬೋರ್ಡ್ ಫಾರ್ ಲ್ಯಾಬರೋಟರೀಸ್) ಮಾನ್ಯತೆ ಪಡೆದಿದೆ. ಕೈಗಾರಿಕಾ ಪ್ರದೇಶ, ಕಾರ್ಪೊರೇಟ್ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಅಪಾರ್ಟ್‌ಮೆಂಟ್ ಸಮುಚ್ಚಯಗಳು, ಬ್ಯಾಂಕ್ ಒಳಗೊಂಡಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸೇರಿ ವಿವಿಧ ಸಾರ್ವಜನಿಕ ಸ್ಥಳಗಳು ಹಾಗೂ ನೂರಕ್ಕೂ ಅಧಿಕ ಮಂದಿ ಒಂದೆಡೆ ಇರುವ ಕಡೆ ಈ ಪ್ರಯೋಗಾಲಯ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದೆ.

ರಕ್ತ ಪರೀಕ್ಷೆ, ಅಧಿಕ ರಕ್ತದೊತ್ತಡ ಪರೀಕ್ಷೆ, ಇಸಿಜಿ, ಕಣ್ಣಿನ ತಪಾಸಣೆ, ದಂತ ಪರೀಕ್ಷೆ ಹಾಗೂ ವೈದ್ಯರ ಸಮಾಲೋಚನೆಯನ್ನು ಶಿಬಿರದಲ್ಲಿ ನಡೆಸಲಾಗುತ್ತದೆ. ಈ ಎಲ್ಲ ಪರೀಕ್ಷೆ ಹಾಗೂ ಸಮಾಲೋಚನೆ ಉಚಿತವಾಗಿ ಇರಲಿದೆ. ಈ ತಪಾಸಣೆಗೆ ಒಳಗಾಗುವವರು ಸಮಗ್ರ ಪರೀಕ್ಷೆಗೆ ಇಚ್ಛಿಸಿದಲ್ಲಿ ನಿಗದಿತ ಶುಲ್ಕ ಪಡೆದು, ಪರೀಕ್ಷೆ ಮಾಡಲಾಗುತ್ತದೆ ಎಂದು ರೆಫರಲ್ ಲ್ಯಾಬ್ಸ್‌ನ ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಮಣಿಕಂದನ್ ಜೆ. ತಿಳಿಸಿದ್ದಾರೆ.

ಮಧುಮೇಹ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ಹೆಚ್ಚಿನ ಚಿಕಿತ್ಸೆಯಿಲ್ಲದೆ ರೋಗವನ್ನು ವಾಸಿ ಮಾಡಬಹದು. ಆದ್ದರಿಂದ ನಗರದ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನಾದ್ಯಂತ ಮನೆಗೆ ತೆರಳಿ, ರಕ್ತದ ಮಾದರಿ ಪಡೆದು ಪರೀಕ್ಷೆ ಮಾಡುವ ವ್ಯವಸ್ಥೆಯೂ ನಮ್ಮಲ್ಲಿ ಇದೆ. ಉಚಿತ ಆರೋಗ್ಯ ತಪಾಸಣೆ ನಡೆಸಲು ಇಚ್ಛಿಸುವವರು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಸಂಪರ್ಕಕ್ಕೆ: 9902160912 ಅಥವಾ 080 35216693

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.