ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ನಗರದ ಪ್ರಮುಖ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಅ.31 ರಿಂದ ನ.11ರವರೆಗೆ ಸೀತಾಫಲ, ಸೀಬೆ ಹಾಗೂ ದಾಳಿಂಬೆ ಹಣ್ಣುಗಳ ಮೇಳವನ್ನು ಆಯೋಜಿಸಲಾಗಿದೆ.

‘ವಿವಿಧ ತಳಿಗಳ ಹಣ್ಣುಗಳು ಮೇಳದಲ್ಲಿ ಲಭ್ಯವಿವೆ. ಮೇಳದ ಅಂಗವಾಗಿ ಶೇ 10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ‘ ಎಂದು ಹಾಪ್ಕಾಮ್ಸ್ ಅಧ್ಯಕ್ಷ ಗೋಪಾಲಕೃಷ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಭಗವಾ / ಕೇಸರ್ ತಳಿಯ ದಾಳಿಂಬೆ, ಅಲಹಾಬಾದ್ ಸಫೇದ್, ತೈವಾನ್ ಹಾಗೂ ಡೈಮಂಡ್ ರೆಡ್ ತಳಿಗಳ ಸೀಬೆ ಮತ್ತು ಸಹನಾ ಹಾಗೂ ಸ್ಥಳೀಯ ತಳಿಗಳ ಸೀತಾಫಲ ಹಣ್ಣುಗಳು ಮೇಳದಲ್ಲಿರಲಿವೆ. ರಾಜ್ಯದಲ್ಲಿ ವಾರ್ಷಿಕವಾಗಿ ಅಂದಾಜು 2.97 ಲಕ್ಷ ಟನ್ ದಾಳಿಂಬೆ, 1.64 ಲಕ್ಷ ಟನ್ ಸೀಬೆ ಮತ್ತು ಏಳು ಸಾವಿರ ಟನ್ನಷ್ಟು ಸೀತಾಫಲ ಬೆಳೆಯಲಾಗುತ್ತದೆ. ಸೊಸೈಟಿಯ ಸದಸ್ಯ ರೈತರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಈ ಹಣ್ಣಿನ ಮೇಳ ಆಯೋಜಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್ ಸಹಕಾರದೊಂದಿಗೆ ನಗರದ ವಿವಿಧ ಅಪಾರ್ಟ್ಮೆಂಟ್ಗಳಲ್ಲಿ ‘ಸಂಚಾರಿ ಮಳಿಗೆ’ಗಳ ಮೂಲಕವೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಮುನೇಗೌಡ ಮಾಹಿತಿ ನೀಡಿದರು.

ಆನ್ಲೈನ್ ಮೂಲಕವೂ ಲಭ್ಯ: ಹಣ್ಣುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಹಾಪ್ಕಾಮ್ಸ್, ಜಕ್ಕೂರು ಟೆಕ್ನೊಪಾರ್ಕ್ ಕಂಪನಿಯ(ಜೆಟಿಪಿಎಲ್) ಭಾಗವಾದ ಇಂಟೆಗ್ರಾ ಮೈಕ್ರೊಸಿಸ್ಟಂ ಪ್ರೈವೇಟ್ ಲಿಮಿಟೆಡ್ನೊಂದಿಗೆ ಕೈಜೋಡಿಸಿದೆ. ಈ ಕಂಪನಿ ಅಭಿವೃದ್ಧಿಪಡಿಸಿರುವ ಒಎನ್ಡಿಸಿ(ONDC – Open Network for Digital Commerce) ಆ್ಯಪ್ ಮೂಲಕ ಆನ್ಲೈನ್ನಲ್ಲಿ ಹಣ್ಣುಗಳಿಗೆ ಬೇಡಿಕೆ ಸಲ್ಲಿಸಬಹುದು. ಆನ್ಲೈನ್ ಮೂಲಕವೇ ಹಣ ಪಾವತಿಸಬಹುದು. ಹಾಪ್ಕಾಮ್ಸ್ನ 20 ಮಳಿಗೆಗಳಿಂದ ಆನ್ಲೈನ್ ಮೂಲಕ ಹಣ್ಣುಗಳನ್ನು ಖರೀದಿಸಬಹುದು. ಆ ಮಳಿಗೆಗಳ ಪಟ್ಟಿ ಆ್ಯಪ್ನಲ್ಲಿದೆ. ಗ್ರಾಹಕರು ಸಮೀಪದ ಮಳಿಗೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ, ಪ್ರಧಾನ ವ್ಯವಸ್ಥಾಪಕ ಜಯಪ್ರಕಾಶ್, ನಿರ್ದೇಶಕರು ಹಾಗೂ ಇಂಟೆಗ್ರಾ ಮೈಕ್ರೊಸಿಸ್ಟಂ ಕಂಪನಿಯ ಮಾರಾಟ ವಿಭಾಗದ ಸಲಹೆಗಾರ ಸಾಯಿ ಪ್ರಭು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.