ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಾಂಧಿ ಜಯಂತಿ ಆಚರಣೆ

Published : 4 ಅಕ್ಟೋಬರ್ 2024, 19:51 IST
Last Updated : 4 ಅಕ್ಟೋಬರ್ 2024, 19:51 IST
ಫಾಲೋ ಮಾಡಿ
Comments

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರು ಪ್ರತಿಪಾದಿಸಿರುವಂತೆ ಪ್ರಾದೇಶಿಕ ಸಂಸ್ಕೃತಿ, ಭಾಷೆ ಮತ್ತು ಅನನ್ಯತೆಗಳನ್ನು ಗೌರವಿಸಲು ಮತ್ತು ಕಾಪಾಡಲು ದೃಢವಾದ ನಿರ್ಧಾರ ಬೇಕು ಎಂದು ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಜಾನಕಿ ನಾಯರ್ ಹೇಳಿದರು.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಾಂಧಿ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಎರಡು ಮಾರ್ಗ ಅನುಸರಿಸಿದರು. ಎರಡೂ ವಿಭಿನ್ನವಾಗಿದ್ದರೂ ಅರ್ಥ ಪೂರ್ಣವಾಗಿತ್ತು. ಒಂದು ಆಗಿನ ಕಾಲಘಟ್ಟದಲ್ಲಿ ಮಹಾತ್ಮ ಎಂಬ ಪಟ್ಟ ಇತ್ತು ಮತ್ತು ಎಲ್ಲರೂ ಅವರನ್ನು ಗೌರವದಿಂದ ಕಾಣುತ್ತಿದ್ದರು. ಮತ್ತೊಂದು ಏಕಾಂಗಿಯಾಗಿ ಹಲವು ಅನಿಷ್ಟ ಆಚರಣೆಗಳ ವಿರುದ್ಧ ಹೋರಾಟ ನಡೆಸಿದರು. ಈ ಹೋರಾಟದಲ್ಲಿ ಮಾನವೀಯ ರಾಜಕೀಯ ಆಯಾಮವೂ ಇತ್ತು ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಅವರು ಕೈಗೊಂಡಿದ್ದ ದಂಡಿ ಯಾತ್ರೆಯನ್ನು ಉದಾಹರಿಸಿದ ಅವರು, ದಂಡಿ ಯಾತ್ರೆಯು ಅಧಿಕಾರಿಶಾಹಿ ಮತ್ತು ದಮನಕಾರಿ ನೀತಿಯ ವಿರುದ್ಧ ಪ್ರೀತಿಯ ಯುದ್ಧ ಮತ್ತು ಅಹಿಂಸಾ ಹೋರಾಟವಾಗಿತ್ತು ಎಂದರು.

ಇದೇ ವೇಳೆ ನಂದಲಾಲ್ ಬೋಸ್ ಅವರ ಹರಿಪುರ ಪ್ಯಾನೆಲ್‌ಗಳ ವಿಶೇಷ ಪೋಸ್ಟ್ ಕಾರ್ಡ್‌ಗಳನ್ನು ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ಡ್ಯಾಶ್ ಬಿಡುಗಡೆ ಮಾಡಿದರು.

ಅಡವಿ ಆರ್ಟ್ಸ್ ಕಲೆಕ್ಟಿವ್‌ನ ಕಲಾವಿದರ ತಂಡದಿಂದ ತಮಟೆ ಪ್ರದರ್ಶನವೂ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT