ಬೆಂಗಳೂರು: ಗೌರಿ ಲಂಕೇಶ್ ಆಶಯಗಳನ್ನು ಜೀವಂತಾಗಿಡಲು ಗೌರಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಆರಂಭಿಸಿರುವ ‘ನ್ಯಾಯಪಥ ’ ಪತ್ರಿಕೆಯನ್ನು ’ದಿ ವೈರ್’ ಸಂಪಾದಕ ಸಿದ್ಧಾರ್ಥ ವರದರಾಜನ್ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ಗೌರಿ ಲಂಕೇಶ್ ಅವರ ಹತ್ಯೆಗೆ ಒಂದು ವರ್ಷ ತುಂಬಿದ ಸಲುವಾಗಿ ಇಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಗೌರಿ ಹೆಸರಿನ ಲೇಖನಿಗಳನ್ನು ಚಂದ್ರಶೇಖರ ಪಾಟೀಲ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಾರ್ಥ, ‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಿವಾಸಿಗಳ ಹಾಗೂ ದಲಿತ ಹಕ್ಕುಗಳ ಹೋರಾಟಗಾರರು, ಬುದ್ಧಿಜೀವಿಗಳು, ವಕೀಲರರನ್ನು ಬಂಧಿಸುವ ಮೂಲಕ ದಬ್ಬಾಳಿಕೆ ನಡೆಸುತ್ತಿದೆ. ಮೋದಿ ಬಳಿ ಜಾರಿ ನಿರ್ದೇಶನಾಲಯ, ಸಿಬಿಐನಂಥ ಸಂಸ್ಥೆಗಳಿರಬಹುದು. ಅಧಿಕಾರ ಇರಬಹುದು. ಆದರೆ ನಮ್ಮ ಬಳಿ ಲೇಖನಿ ಇದೆ. ಅದನ್ನೇ ಬಳಸಿ ನಾವು ಈ ದಬ್ಬಾಳಿಕೆ ವಿರುದ್ಧದ ಸಮರವನ್ನು ಗೆಲ್ಲುತ್ತೇವೆ’ ಎಂದರು.

‘ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ, ಬುದ್ಧೀಜೀವಿಗಳ ಬಂಧನ ಆಡಳಿತ ಪಕ್ಷದ ಹತಾಶೆಯ ಪ್ರತೀಕ’ ಎಂದರು.

ಗೌರಿ ಸಂವಿಧಾನ, ಜಾತ್ಯತೀತ ತತ್ವ, ಶಾಂತಿಯ ಬಗ್ಗೆ ನಂಬಿಕೆ ಹೊಂದಿದ್ದವರು. ಆದಿವಾಸಿ ಹಾಗೂ ದಲಿತರ ಹಕ್ಕುಗಳ ಬಗ್ಗೆ ಬದ್ಧತೆ ಹೊಂದಿದ್ದರು. ಆಕೆಯ ಹತ್ಯೆಯಿಂದ ನಾವೆಲ್ಲ ಆತಂಕಕ್ಕೊಳಗಾಗುತ್ತೇವೆ ಎಂದು ಅವರು ಭಾವಿಸಿರಬಹುದು. ನಾವೆಲ್ಲ ಒಂದು ಕುಟುಂಬವಾಗಿ ಹೋರಾಟಿ ಆಕೆಯ ಆತ್ಮ ಸಮರ್ಪಣೆಗೆ ನ್ಯಾಯ ಒದಗಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.