‘ಸಾವಯವ ಆಹಾರ ಕಡಿಮೆ ದರದಲ್ಲಿ ಜನ ಸಾಮಾನ್ಯರಿಗೂ ತಲುಪಬೇಕು. ಉತ್ಪಾದಕರು – ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಬೇಕೆಂಬ ಉದ್ದೇಶಗಳೊಂದಿಗೆ ಗ್ರೀನ್ ಪಾತ್ ಸಂಸ್ಥೆ ನಡೆಸುತ್ತಿರುವ ವಾರದ ‘ಸಾವಯವ ಸಂತೆ‘ಗೆ 25ರ ಸಂಭ್ರಮ.

ಇದೇ ಭಾನುವಾರದಂದು ನಗರದ ಮಂತ್ರಿ ಮಾಲ್ ಮೆಟ್ರೊ ಸ್ಟೇಷನ್ ಎದುರು ಇರುವ ಗ್ರೀನ್ಪಾತ್ನ ‘ಹಸಿರು ತೋಟ’ದ ಅಂಗಳದಲ್ಲಿ 25ನೇ ‘ಸಾವಯವ ಸಂತೆ‘ಯನ್ನು ಸಂಸ್ಥೆ ಆಯೋಜಿಸಿದೆ. ಅಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯುವ ಸಂತೆಯಲ್ಲಿ ಸಾವಯವ ಉತ್ಪನ್ನಗಳ ಪ್ರದರ್ಶನ, ಮಾರಾಟದ ಜತೆಗೆ ಸಾವಯವ ಖಾದ್ಯಗಳನ್ನು ಸವಿಯುವ ಅವಕಾಶವಿರುತ್ತದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ.

‘ಕಲಾವಿದರಾದ ಪ್ರಶಾಂತ್ ಶಾಸ್ತ್ರಿ ಮತ್ತು ಹೇಮಾ ಪ್ರಭಾತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕವಿತಾ ಸುಧಾಕರ್ ತಂಡದಿಂದ ನೃತ್ಯ, ನಾಗರಾಜ್ ಟಿ.ಆರ್. ತಂಡದಿಂದ ಗಾಯನ ಕಾರ್ಯಕ್ರಮವಿದೆ. ಮಧ್ಯಾಹ್ನ 2ರಿಂದ 3 ಗಂಟೆಯವರೆಗೆ ಹವ್ಯಾಸಿ ಗಾಯಕರಿಗೂ ಗಾಯನಕ್ಕೆ ಅವಕಾಶವಿರುತ್ತದೆ‘ ಎಂದು ಸಂಸ್ಥೆಯ ಸಂಸ್ಥಾಪಕ ಎಚ್.ಆರ್. ಜಯರಾಮ್ ತಿಳಿಸಿದ್ದಾರೆ.

‘ಸಾವಯವ ಆಹಾರ ಪದಾರ್ಥಗಳತ್ತ ಜನರು ಗಮನ ಹರಿಸಬೇಕೆಂಬ ಜಾಗೃತಿಗಾಗಿ ಈ ಸಂತೆಯನ್ನು ನಡೆಸಲಾಗುತ್ತಿದೆ‘ ಎಂದು ಅವರು ತಿಳಿಸಿದ್ದಾರೆ.

‘ಸುಮಾರು 20ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳು ಸಾವಯವ ಸಂತೆಯಲ್ಲಿ ಲಭ್ಯವಿರುತ್ತವೆ. ಗ್ರೀನ್ ಪಾತ್ ಅಡುಗೆ ಮನೆಯಲ್ಲಿ ಜನಸಾಮಾನ್ಯರು ಬಂದು ಅಡುಗೆ ಮಾಡಿ, ಅದನ್ನು ರೆಸ್ಟೋರೆಂಟ್ ಊಟದ ಜೊತೆಗೆ ಸೇರ್ಪಡೆ ಮಾಡುವ ‘ಸಮುದಾಯ ಅಡುಗೆ’ ಎಂಬ ವಿಶೇಷ ಕಾರ್ಯಕ್ರಮವೂ ಇಲ್ಲಿ ನಡೆಯುತ್ತದೆ‘ ಎಂದು ಹೇಳಿದ್ದಾರೆ. ಸಾವಯವ ಸಂತೆ ಕುರಿತ ಹೆಚ್ಚಿನ ಮಾಹಿತಿಗೆ; 9538256777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.