ಬೆಂಗಳೂರು:‘ಖಾದಿ ಬಟ್ಟೆಯಲ್ಲಿನ ಕಲಬೆರಕೆಗೆ ತಡೆ ಹಾಕಿ, ಶುದ್ಧ ಕೈಮಗ್ಗ ಉತ್ಪನ್ನಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು’ ಎಂದು ರಂಗಕರ್ಮಿ ಪ್ರಸನ್ನ ಆಗ್ರಹಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಇಲ್ಲಿ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಖಾದಿ ಮತ್ತು ಕೈಮಗ್ಗ ಎನ್ನುವುದು ಪವಿತ್ರವಾದ ಬ್ರ್ಯಾಂಡ್. ಇದರ ಕಲಬೆರಕೆಯಿಂದನೂಲುಗಾರ್ತಿಯರು ಹಾಗೂ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧ್ಯಯನವೊಂದರ ಪ್ರಕಾರ ಶೇ 70ರಷ್ಟು ಖಾದಿ ಬಟ್ಟೆಯು ಕಲಬೆರಕೆಯಿಂದ ಕೂಡಿದೆ. ಇದಕ್ಕೆ ಕಡಿವಾಣ ಹಾಕಿದರೆ ಮಾತ್ರ ಗ್ರಾಮೀಣ ಜನತೆಗೆ ನ್ಯಾಯ ಸಿಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ಮನವಿ ಮಾಡಲಾಗಿದೆ. ಶುದ್ಧ ಖಾದಿ ಅಭಿಯಾನ ಪ್ರಾರಂಭಿಸುವ ಭರವಸೆಯನ್ನು ಅವರು ನೀಡಿದ್ದಾರೆ’ ಎಂದು ತಿಳಿಸಿದರು.

‘ಕಲಬೆರಕೆ ಖಾದಿ ಬಟ್ಟೆ ಪತ್ತೆಯ ಸಂಬಂಧಕನ್ನಡದ ಕೆಲ ಯುವಕರು ‘ಕೋಶಾ’ ಹೆಸರಿನ ನವೋದ್ಯಮ ಪ್ರಾರಂಭಿಸಿ, ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ಈಗ ಕಲಬೆರಕೆ ಕೈಮಗ್ಗ ಬಟ್ಟೆಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ಇಡೀ ದೇಶದ ಕೋಟ್ಯಾಂತರ ಮಂದಿ ನೂಲುಗಾರ್ತಿಯರು ಹಾಗೂ ನೇಕಾರರ ಬದುಕು ಹಸನಾಗಲಿದೆ’ ಎಂದು ಆಶಾವಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.